ಬೆಂಗಳೂರು: ಪ್ರತಿಷ್ಠಿತ ಕಂಪೆನಿ ಹೆಸರಲ್ಲಿ ನಕಲಿ ಟೀ ಪುಡಿ ಮಾರಾಟ: ಆರೋಪಿ ಸಿಸಿಬಿ ವಶಕ್ಕೆ

Update: 2023-11-30 16:02 GMT

ಬೆಂಗಳೂರು: ಪ್ರತಿಷ್ಠಿತ ಟಾಟಾ ಕಂಪೆನಿಯ ಅಗ್ನಿ ಟೀ ಪುಡಿಯನ್ನು ನಕಲು ಮಾಡಿ ಅಸಲಿ ಎಂದು ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು 1.26 ಲಕ್ಷ ರೂ. ಮೌಲ್ಯದ ಟೀ ಪುಡಿಯನ್ನು ಜಪ್ತಿಮಾಡಿಕೊಂಡಿದ್ದಾರೆ

ನಗರದ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಸ್ಟ್ರೀಟ್, ಲಾಲ್ ಮಸೀದಿ ರಸ್ತೆಯಲ್ಲಿರುವ ಮನೆಯಲ್ಲಿ ಪ್ರತಿಷ್ಠಿತ ಟಾಟಾ ಕಂಪೆನಿಯ ಅಗ್ನಿ ಟೀ ಪುಡಿಯನ್ನು ನಕಲು ಮಾಡಿ ಸಾರ್ವಜನಿಕರಿಗೆ ಅಸಲಿ ಎಂದು ನಂಬಿಸಿ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆಯಲ್ಲಿ ತೊಡಗಿರುವ ಬಗ್ಗೆ ಸಿಸಿಬಿ ಪೊಲೀಸರು ಸುಳಿವು ಕಲೆ ಹಾಕಿದ್ದಾರೆ.

ಸರಕಾರಕ್ಕೆ ಮತ್ತು ಪ್ರತಿಷ್ಠಿತ ಕಂಪೆನಿಗೆ ನಷ್ಟವುಂಟು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ಅಧಿಕಾರಿಗಳು ಈ ಮನೆಯ ಮೇಲೆ ದಾಳಿ ಮಾಡಿ, ನಕಲಿ ಟೀ ಪುಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಸಂದರ್ಭದಲ್ಲಿ 1 ಕೆ.ಜಿ. ಮತ್ತು 250 ಗ್ರಾಂ ಪ್ಯಾಕೆಟ್‍ಗಳಿರುವ ಒಟ್ಟು 450 ಕೆ.ಜಿ ಟೀ ಪುಡಿಯನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1.26 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಸಂಬಂಧ ಆರೋಪಿ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಕಾಪಿರೈಟ್ಸ್ ಆಕ್ಟ್ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News