ಪ್ರೊ.ಸಾಯಿಬಾಬಾ ಜೀವನದ ಎಲ್ಲ ಪರೀಕ್ಷೆಯಲ್ಲೂ ಪಾಸ್ ಆದವರು : ಶಿವಸುಂದರ್

Update: 2024-10-20 16:11 GMT

ಬೆಂಗಳೂರು : ಪ್ರೊ.ಜಿ.ಎನ್.ಸಾಯಿಬಾಬಾ ಅವರು ಜೀವನದ ಪ್ರತಿ ಪರೀಕ್ಷೆಯಲ್ಲೂ ಪಾಸ್ ಆದವರು. ಶೇ.90ರಷ್ಟು ಅಂಗವೈಕಲ್ಯವನ್ನು ಹೊಂದಿದ್ದ ಅವರು, ತನ್ನ ಛಲ, ವಿಶ್ವಾಸಕ್ಕೆ ಧಕ್ಕೆ ತರದಂತೆ ಬದುಕುವ ಪ್ರತಿನಿತ್ಯದ ಸವಾಲನ್ನು ಎದುರಿಸಿದ್ದಾರೆ ಎಂದು ಅಂಕಣಕಾರ ಶಿವಸುಂದರ್ ತಿಳಿಸಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ಪಿಡಿಎಫ್, ಪಿಯುಸಿಎಲ್, ಕರ್ನಾಟಕ ಶ್ರಮಿಕ ಶಕ್ತಿ ಮತ್ತು ಮಾನವ ಹಕ್ಕು ಸಂಘಟನೆಗಳ ವತಿಯಿಂದ ಆಯೋಜಸಿದ್ದ, ಪ್ರೊ.ಜಿ.ಎನ್.ಸಾಯಿಬಾಬಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಾಯಿಬಾಬಾ ಆಂದ್ರದ ಅಮಲಾಪುರಂನಲ್ಲಿ ಮದ್ಯಮ ವರ್ಗದ ರೈತ ಕುಟುಂಬದಲ್ಲಿ ಹುಟ್ಟಿದವರು ಅವರ ತಾಯಿ ತೀರಿದಾಗ ಒಂದು ದಿನದ ಪೆರೋಲ್ ಕೂಡ ಸಿಗುವುದಿಲ್ಲ. ರಾಮ್‍ರಹೀಮ್ ಸಜ್ಜೇಸೌಧ ಎಂಬ ವ್ಯಕ್ತಿಯ ಮೇಲೆ ಪೊಕ್ಸೊ ಸೇರಿ ಅನೇಕ ಪ್ರಕರಣಗಳಿವೆ. ಅವನಿಗೆ ವರ್ಷಕ್ಕೆ 100ದಿನ ಪೆರೋಲ್ ಸಿಗುತ್ತದೆ. ಬಿಲ್ಕಿಸ್ ಬಾನು ಅಫರಾಧಿಗಳಿಗೆ 12 ವರ್ಷ ಜೈಲಿನಲ್ಲಿದ್ದರೆ, ಸುಮಾರು ನಾಲ್ಕುವರೆ ವರ್ಷ ಪೆರೋಲ್ ಮೇಲೆ ಹೊರಗಡೆ ಇದ್ದಾರೆ. ಆದರೆ ಸಾಯಿಬಾಬಾ ಅಸವರಿಗೆ ಒಂದು ದಿನವೂ ಸಿಗುವುದಿಲ್ಲ ಎಂದು ತಿಳಿಸಿದರು.

ಜಿ.ಎನ್.ಸಾಯಿಬಾಬಾ ಅವರನ್ನು ಮಂಡಲ್ ಕಮಿಷನ್ ಹೋರಾಟದ ಸಂದರ್ಭದಲ್ಲಿ ಭೇಟಿ ಮಾಡಿದ್ದೇನೆ. ಅದಾದ ನಂತರ 1992ರಲ್ಲಿ ಮೆಸ್ ಕಾರ್ಮಿಕರಿಗೆ ಸರಿಯಾದ ಸಂಬಳ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಹೋರಾಟ ಮಾಡುತ್ತಾರೆ. ಡಬ್ಲೂಟಿಒ, ಗ್ಯಾಟ್ ಒಪ್ಪಂದ ಸಂದರ್ಭದಲ್ಲಿ ರೈತ ಹೋರಾಟವನ್ನು ಸಂಘಟಿಸಿದವರಲ್ಲಿ ಸಾಯಿಬಾಬಾ ಪ್ರಮುಖರು. 2004ರ ನಂತರ ಜಾಗತಿಕಮಟ್ಟದಲ್ಲಿ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಾಗಿ ಪ್ರೆಂಚ್ ಆಫ್ ಇಂಡಿಯನ್ ರೆವ್ಯೂಲೇಷನ್ ಎಂಬ ಸಂಘಟನೆಯನ್ನು ಕಟ್ಟುತ್ತಾರೆ. ಆದಿವಾಸಿಗಳನ್ನು ಸ್ಥಳಾಂತರವನ್ನು ವಿರೋಧಿಸಿ, ಅವರ ಹಕ್ಕಿಗಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ನಕ್ಸಲೈಟ್ ಹೆಸರಿನಲ್ಲಿ ಆದಿವಾಸಿಗಳ ಬಂಧನ ಮತ್ತು ಕೊಲೆ ಮಾಡುವುದು ಹೆಚ್ಚಾಗುತ್ತಿದೆ. ಜನರ ಧ್ವನಿಯನ್ನು ಹತ್ತಿಕ್ಕಿದರೆ ಜನರನ್ನು ಲೂಟಿ ಮಾಡುವುದು ಸುಲಭ ಎನ್ನುವುದು ಪ್ರೊ.ಸಾಯಿಬಾಬಾ ಅವರ ಸಾವಿನ ಹಿಂದಿನ ತಾತ್ಪಾರ್ಯವಾಗಿದೆ. ಇಂದು ಭಾರತವನ್ನು ಹೊಸ ಲೂಟಿಗೆ ಸಜ್ಜು ಮಾಡಲಾಗುತ್ತಿದೆ.

ಎನ್‍ಇಪಿ ಸೇರಿದಂತೆ ಎಲ್ಲದರಲ್ಲೂ 4ನೇ ಕೈಗಾರಿಕಾ ಕ್ರಾಂತಿ ಬರಬೇಕು ಎಂದು ಮಾತನಾಡಲಾಗುತ್ತಿದೆ. ಪ್ರಧಾನಿ ಮೋದಿ ಹೇಳುತ್ತಾರೆ, ಇದು ಕರ್ತವ್ಯದ ಕಾಲ, ಹಕ್ಕುಗಳ ಕಾಲ ಅಲ್ಲ. ಆ ಮೂಲಕ ಅಮೃತ ಕಾಲ ತಲುಪುತ್ತೇವೆ ಎನ್ನುವುದು ಒಂದು ರಾಜಕೀಯವಾಗಿದೆ. ಯುಎಪಿಯ ಒಂದು ವಿಶೇಷ ಕಾಯ್ದೆಯಾಗಿದೆ. ಜನರ ಹೋರಾಟಗಳ ತಲೆಯ ಮೇಲೆ ತೂಗುವ ಕತ್ತಿಯ ಹಾಗೆ ಮಾಡಿರುವುದು ಯುಪಿಎ ಸರಕಾರ ಎಂದು ತಿಳಿಸಿದರು.

ಸಬೆಯಲ್ಲಿ ಪ್ರಾಧ್ಯಾಪಕಿ ಡಾ.ರಾಧಿಕ ಚಿತ್ಕಾರ, ಪಿಡಿಎಫ್‍ನ ಪ್ರೊ.ನಗರಗೆರೆ ರಮೇಶ್, ಪಿಯುಸಿಎಲ್‍ನ ಅರವಿಂದ್ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

‘ಜಿ.ಎನ್.ಸಾಯಿಬಾಬಾ ಅವರ ಪ್ರಕರಣ ನೂರು ರೂ.ದಂಡ ಹಾಕಿ ಬಿಡುವುದಾಗಿತ್ತು. ಅದಕ್ಕೆ 10 ವರ್ಷ ಜೈಲಿನಲ್ಲಿರಿಸಿ, ಕೊಲ್ಲಲಾಯಿತು. ಸಂಘಿಗಳ ಕೈಯಲ್ಲಿ ಬಾಂಬ್ ಇದ್ದರೆ ಜೈಲು, ಹೋರಾಟಗಾರರ ಕೈಯಲ್ಲಿ ಕಲ್ಲು ಇದ್ದರೆ 15 ವರ್ಷ ಜೈಲು. ಭ್ರಷ್ಟಾಚಾರ, ಅತ್ಯಾಚಾರ, ಹಿಂಸಾಚಾರ ಮಾಡಿ ಜೈಲಿಗೆ ಹೋದವರು ಬೇಲ್‍ನಲ್ಲಿ ಬರುತ್ತಾರೆ ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯಾಗಿದೆ’

-ಎಸ್.ಬಾಲನ್, ಹಿರಿಯ ವಕೀಲ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News