ಔರಾದ್ | ಮನೆ ಭಾಷೆ ಬಂಜಾರಾ ಆದರೂ ಮಾತೃಭಾಷೆ ಕನ್ನಡವೇ ಆಗಿದೆ : ಶಾಸಕ ಪ್ರಭು ಚವ್ಹಾಣ್

Update: 2024-11-21 17:22 GMT

ಔರಾದ್ : ಗಡಿ ಭಾಗವಾದ ಔರಾದ್(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಕನ್ನಡದ ಅಭಿವೃದ್ಧಿಗೆ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇನೆ. ನನ್ನ ಮನೆಯ ಭಾಷೆ ಬಂಜಾರಾ ಆದರೂ ಮಾತೃಭಾಷೆ ಕನ್ನಡವೇ ಆಗಿದೆ ಎಂದು ಶಾಸಕ ಪ್ರಭು ಬಿ.ಚವ್ಹಾಣ್ ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಪಟ್ಟಣದ ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಹಿತಿ ಸಂಗಮ ಕಾರ್ಯಕ್ರಮದಡಿ ಔರಾದ್(ಬಿ) ಹಾಗೂ ಕಮಲನಗರ ತಾಲ್ಲೂಕಿನ ಕನ್ನಡ ಸಾಹಿತಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ನನ್ನ ತನು, ಮನಗಳಲ್ಲಿ ಕನ್ನಡ ಅಡಗಿದೆ. ಅನಿವಾರ್ಯ ಕಾರಣಗಳಿಂದ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಆದರೆ ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಾರದೆಂದು ಬಹಳಷ್ಟು ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ತೆರೆಯುವ ಕೆಲಸ ಮಾಡಿದ್ದೇನೆ ಎಂದರು.

ಕನ್ನಡ ಭಾಷೆಯ ರಕ್ಷಣೆಗಾಗಿ ನಿರಂತರ ಶ್ರಮಿಸುವ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿಗಳು ಮತ್ತು ಕಲಾವಿದರ ಮನೆಗೆ ಭೇಟಿ ನೀಡಿ ಸನ್ಮಾನಿಸುತ್ತಾ ಬಂದಿದ್ದೇನೆ. ಕನ್ನಡಕ್ಕಾಗಿ ದುಡಿಯುವರನ್ನು ಗೌರವಿಸುವುದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ ಎಂದು ಅವರು ಹೇಳಿದರು.

ಸಾಹಿತಿಗಳಾದ ನಾಗಯ್ಯ ಸ್ವಾಮಿ, ಬಸವರಾಜ್ ಸ್ವಾಮಿ, ರೇಣುಕಾ ಮಠ್, ಶಿಲ್ಪಾ ರಾಜನಾಳೆ, ಅಶ್ವಿನಿ ಸುಂದಾಳೆ, ಜ್ಯೋತಿ ಡಿಬುಮ್ಮ, ತುಕಾರಾಮ್ ರಾಜನಾಳೆ, ಸಂಗಮೇಶ್ ಕೆ.ಬೆಲ್ದಾಳ್, ನಾಗೇಶ್ ಮಡಿವಾಳ್, ಜಯಪ್ರಕಾಶ್ ಅಲ್ಮಾಜೆ, ಪೂಜಾ ಎಸ್.ಪಟ್ನೆ, ರಾಜೇಂದ್ರ ಯರನಾಳೆ, ಪರಮೇಶ್ ಡಿ.ವಿಲಾಸಪುರೆ, ಬಸವರಾಜ್ ಪಾಂಚಾಳ್, ಪ್ರಕಾಶ್ ದೇಶಮುಖ್, ಬಲಭೀಮ್ ಕುಲಕರ್ಣಿ, ನಂದಾದೀಪ್ ಬೋರಾಳೆ, ಬಾಲಾಜಿ ಕುಂಬಾರ್, ಪುಷ್ಪವತಿ ಚಿಕುರ್ತೆ, ಮಾಣಿಕಾದೇವಿ ಪಾಟೀಲ್, ರಾಜಕುಮಾರ್ ಬಿರಾದಾರ್, ಕಾಶಿನಾಥ್ ಬಾವಗೆ, ವಿಶಾಲ್ ಮಹಾಜನ್, ಡಾ.ವಿಶ್ವನಾಥ ಕಿವಡೆ, ರಾಜಶೇಖರ್ ಅಜ್ಜಾ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸಕ ಪ್ರಭು ಬಿ.ಚವ್ಹಾಣ ಅವರಿಗೆ ಸಾಹಿತ್ಯ ಸಂವರ್ಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ಸಾಹಿತಿಗಳಾದ ರಾಜೇಂದ್ರ ಯರನಾಳೆ, ಜ್ಯೋತಿ ಬೊಮ್ಮಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ್ ಕಟ್ಟೆ, ಟಿ.ಎಮ್.ಮಚ್ಚೆ, ತಾಲ್ಲೂಕಾಧ್ಯಕ್ಷರಾದ ಡಾ. ಶಾಲಿವಾನ್ ಉದಗಿರೆ, ಪ್ರಶಾಂತ್ ಮಠಪತಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಶಿವಣಕರ್, ಯುವ ಘಟಕದ ಅಧ್ಯಕ್ಷ ಗುರುನಾಥ್ ರಾಜಗೀರಾ, ಅಂಬಾದಾಸ್ ನೇಳಗೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಸಚಿನ್ ರಾಠೋಡ್, ಬಸವರಾಜ್ ಹಳ್ಳೆ, ಜಗನ್ನಾಥ್ ದೇಶಮುಖ್, ಮಲ್ಲಿಕಾರ್ಜುನ್ ಟಂಕಸಾಲೆ, ಅಶೋಕ್ ಶೆಂಬೆಳ್ಳೆ ಮುಂತಾದವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News