ಬೀದರ್ | ಬೌದ್ಧಗಯಾ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಕರಪತ್ರ ಬಿಡುಗಡೆ

ಬೀದರ್ : ಎ.5 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬೌದ್ಧ ಭಿಕ್ಕು ಮತ್ತು ಭಿಕ್ಕುಣಿಯರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆಯ ಕರಪತ್ರಗಳು ಬಿಡುಗಡೆ ಮಾಡಲಾಯಿತು.
ಇಂದು ಬಸವಕಲ್ಯಾಣ ನಗರದ ಅಂಬೇಡ್ಕರ್ ವೃತ್ತದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಪಿಂಟು ಕಾಂಬಳೆ ಅವರು, ಬೌದ್ಧ ಗಯಾ ಟೆಂಪಲ್ ಎಕ್ಟ್ 1949 ಅನ್ನು ರದ್ದುಪಡಿಸಿ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಬಿಹಾರದ ಬೌದ್ಧ ಗಯಾದಲ್ಲಿ ಬೌದ್ಧ ಗುರುಗಳು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಈ ಸತ್ಯಾಗ್ರಹವನ್ನು ಬೆಂಬಲಿಸಿ ಜಿಲ್ಲೆಯ ಬೌದ್ಧ ಭಿಕ್ಕು ಮತ್ತು ಭಿಕ್ಕುಣಿಯರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಎ.5 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ತಾಲ್ಲೂಕಿನ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌತಮ್ ಜಾಂತೆ, ಸಿಕಂದರ್ ಸಿಂಧೆ, ರಾಜು ಸೂರ್ಯವಂಶಿ, ಶಂಕರ್ ಫುಲೆ, ಚೈತನ್ ಕಾಡೆ, ಸಂದೀಪ್ ಮುಕಿಂದೆ, ಸಾಗರ್ ರಾಯಗೋಳ, ವಿಜಯಕುಮಾರ್ ಡಾಂಗೆ, ಅಶೋಕ್ ಮಧಾಳೆ, ಮೀಲಿಂದ್ ಕೊಳ್ಳದ, ಸುರೇಶ್ ರಾಮಬಾಣ, ಸೋಮನಾಥ್ ಮುಡಬೆಕರ್, ಸುಭಾಷ್ ನಾಟಕರ್, ಮೀಲಂದ್ ಸಾಗರ್, ಕಾಶಿನಾಥ್ ಹೋಳ್ಕರ್, ದತ್ತು ಲಾಡವಂತಿ, ಜಯಪ್ಪಾ, ಸುಧಾಮ ಮೋರೆ, ಜಿ.ಹೋಳ್ಕರ್ ಹಾಗೂ ರಾಜು ಕಾಂಬಳೆ ಇತರರು ಉಪಸ್ಥಿತರಿದ್ದರು.