ಬೀದರ್ | ಕನ್ನಡ ರಾಜ್ಯೋತ್ಸವಕ್ಕೆ ಗೈರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ
ಬೀದರ್ : ಭಾಲ್ಕಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಲು ಗೈರು ಹಾಜರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸೇನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ನೇತೃತ್ವದ ತಂಡವು ತಹಶೀಲ್ದಾರರಿಗೆ ಬರೆದ ಮನವಿ ಪತ್ರದಲ್ಲಿ, ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಹಲವಾರು ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಕಂಡು ಬಂದಿದೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗೈರು ಹಾಜರಾಗಿದ್ದು, ಅವರ ಕರ್ತವ್ಯ ನಿರ್ಲಕ್ಷತನಕ್ಕೆ ಕೈಗನ್ನಡಿಯಾಗಿದೆ. ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಗಮೇಶ ಗುಮ್ಮೆ, ಬಸವರಾಜ ಕಾರಬಾರಿ, ಸುದೀಪ ತುಗಾಂವೆ, ಸಚಿನ ಪಾಟೀಲ, ಭದ್ರೇಶ ಸ್ವಾಮಿ, ಸಚಿನ ಸೊನಾಳೆ, ನಾಗಭೂಷಣ ಮಾಮಡಿ, ಶ್ರೀನಿವಾಸ ಮೇತ್ರೆ, ಅನೀಲ ಸಾವಕಾರ ಮತ್ತಿತರರು ಇದ್ದರು.