ಬೀದರ್ | ಜಾನಪದ ಹಾಡುಗಳು ಜನರ ಬದುಕಿನ ಜೀವಾಳ : ಕೆ.ಪುಂಡಲೀಕ ರಾವ

Update: 2024-11-29 14:23 GMT

ಬೀದರ್ : ನಗರದ ಡಾ.ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಕನ್ನಡ ಜಾನಪದ ರಾಜ್ಯೋತ್ಸವ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಮತ್ತು ಸಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲೀಕರಾವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನಪದಗಳು ನಶಿಸಿಹೋಗುವಂತ ಸಂದರ್ಭದಲ್ಲಿ ಈ ರೀತಿ ಜಾನಪದ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಜಾನಪದ ಗೀತೆಗಳು ಬೆಳಕಿಗೆ ಬರಲು ಸಾಧ್ಯ ಎಂದು ನುಡಿದರು.

ಕಲಬುರಗಿ ಜಿಲ್ಲಾ ಕನ್ನಡ ಜಾನಪದ ಅಧ್ಯಕ್ಷ ಎಮ್.ಬಿ ನಿಂಗಪ್ಪಾ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಜಾನಪದ ಗೀತೆಗಳಿಗೆ ಬಹಳ ಮಹತ್ವವಿದ್ದು, ವಿಶೇಷವಾಗಿ ಕರ್ನಾಟಕದಲ್ಲಿ ಅದರ ಪ್ರಭಾವ ಹೆಚ್ಚು ಕಾಣುತ್ತೇವೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಜಾನಪದ ಗೀತೆಗಳ ಬಗ್ಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.

ವಿಜಯ ಲಕ್ಷ್ಮಿ ಕೌಟಗೆ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಕರ್ನಾಟಕದ ಮುಕುಟ ಬೀದರ್ ಜಿಲ್ಲೆಯಲ್ಲಿ ಇಂತಹ ಜಾನಪದ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿಕೊಂಡು ಬಂದಂತವರು ಮಹಿಳಾ ಮಣಿಗಳು. ಇದಕ್ಕೆ ಬೀದರ್ ಜಿಲ್ಲೆ ಸಾಕ್ಷಿಎಂದರು.

ಎಂ.ಜಿ.ದೇಶಪಾಂಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಮೊಬೈಲ್ಗೆ ಜನ ಆಕರ್ಶಿತರಾಗುತ್ತಿರುವುದು ಕಂಡು ಬರುತ್ತಿದೆ. ಜಾನಪದ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ಜ್ಞಾನ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆವಿಲ್ಲದೆ, ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಎಸ್.ಎಮ್.ಜನವಾಡಕರ್, ಎಸ್.ಬಿ. ಕುಚಬಾಳ, ಶಾಲಿವಾನ ಗಂದಗೆ, ಸಿದ್ಧಮ್ಮಾ ಹಳಕಾಯಿ ಉಪಸ್ಥಿತರಿದ್ದರು. ಕನ್ನಡ ಜಾನಪದ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಶೇಷರಾವ ಬೇಳಕೋಣಿಕರ ಅವರ ನೇತ್ರತ್ವದಲ್ಲಿ ಕಾರ್ಯಕ್ರಮ ಜರುಗಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News