ಬೀದರ್ | ಮಾಜಿ ವಿಧಾನ ಪರಿಷತ್ ಸದಸ್ಯ ಕೇಶವರಾವ್ ನಿಟ್ಟುರಕರ್ ನಿಧನ
Update: 2024-12-12 12:23 GMT
ಬೀದರ್ : ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ವಿಧಾನಸಭೆ ಉಪಸಭಾಪತಿಯಾದ ಕೇಶವರಾವ್ ನಿಟ್ಟುರಕರ್ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಯೋಸಹಜರಾಗಿ ಬಳಲುತ್ತಿದ್ದ ಅವರು ಇಂದು ಮುಂಜಾನೆ ಭಾಲ್ಕಿಯಲ್ಲಿ ಕೊನೆಯುಸಿರೆಳೆದಿದ್ದು, ಅವರು ತಮ್ಮ ಕುಟುಂಬ ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.