ಬೀದರ್ | ಕರ್ನಾಟಕ ರಾಜ್ಯ ಬರಹಗಾರ ಸಂಘದ ಜಿಲ್ಲಾ ಘಟಕ ಉದ್ಘಾಟನೆ

Update: 2024-11-04 16:08 GMT

ಬೀದರ್ : ಸಮಾಜ ಜಾಗೃತಿಗಾಗಿ ಕಾವ್ಯ ರಚನೆ ಅಗತ್ಯ. ನಮ್ಮ ಕಾವ್ಯ ಪರಂಪರೆಗೆ ಬುದ್ಧ, ಬಸವ, ಅಂಬೇಡ್ಕರ್ ತತ್ತ್ವ ಸಿದ್ದಾಂತಗಳನ್ನು ಕಾವ್ಯದಲ್ಲಿ ತಂದು ಸಾಮಾಜದ ಏಳಿಗೆಗೆ ಕವಿ ಕಾವ್ಯ ರಚಿಸಬೇಕೆಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಅಭಿಮತ ವ್ಯಕ್ತಪಡಿಸಿದ್ದಾರೆ.

ಹುಮನಾಬಾದ ಪಟ್ಟಣದ ಮಾತೋಶ್ರೀ ಪ್ಯಾರಾಮೆಡಿಕಲ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿಯ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ಹಾಗೂ ಬೀದರ್ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕೃತಿ ಉಳಿಸುವಿಕಾಗಿ ಕರ್ನಾಟಕ ನಾಮಕರಣವಾಯಿತು. ೧೯೫೬ರಲ್ಲಿ ಮೈಸೂರು ರಾಜ್ಯ, ೧೯೬೩ರ ನವೆಂಬರ್ ೧ ರಂದು ಕರ್ನಾಟಕ ಎಂದು ದೇವರಾಜ ಅರಸು ನಾಮಕರಣ ಮಾಡಿದರು. ಅಂದಿನಿಂದ ಇಂದಿನವರೆಗೂ ನಿರಂತರ ಭಾಷೆ ಉಳಿಸಿ ಬೆಳೆಸಿಕೊಂಡು ಬಂದಿದೆ. ಸಂಘಗಳು ಅನೇಕವಾದರೂ ಮಾಡುವ ಕೆಲಸ ಕನ್ನಡ ವಾಗಿರಬೇಕಾಗಿದೆ ಎಂದರು.

ಕವಿ ಗೋಷ್ಠಿಯಲ್ಲಿ ಬಂಕಲಗಿ, ಶ್ರವಣಕುಮಾರ, ಸುನೀತಾ ಪುಂಡಲೀಕ, ಲಕ್ಷ್ಮಿಕಾಂತ ಕೂಬಾಳಕರ, ಡಾ.ಸುಬ್ಬಣ್ಣ ಕರಕನಳ್ಳಿ, ರವಿದಾಸ ಕಾಂಬಳೆ, ರವಿದಾಸ, ಮೊಹಿನುದ್ದೀನ್ ಹಣಕುಣಿ, ವೀರಶೆಟ್ಟಿ ಪಾಟೀಲ, ಸಂಗಮೇಶ ಮುರ್ಕೆ, ಭಗವಾನ್, ರಮೇಶ ಸಲಗರ, ಗಣಪತಿ ಹದಿನಾಲ್ಕು ಜನ ಕವಿಗಳು ತಮ್ಮ ಕವನ ವಾಚನ ಮಾಡಿದರು.

ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ವಿಜಯಕುಮಾರ ಚಟ್ಟಿ ವಹಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿ ತಿಂಗಳಲ್ಲಿ ಒಂದಾದರೂ ಕಾರ್ಯಕ್ರಮ ಮಾಡಬೇಕು. ಸಾಹಿತಿ, ಕವಿಗಳನ್ನು ಗುರುತಿಸುವ ಜವಬ್ದಾರಿ ಇದೆ. ಮುಂದಿನ ದಿನಗಳಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದರು.

ತಾಲೂಕಾ ಕಸಾಪ ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ಸಾಹಿತಿ ಡಾ.ಬಸವರಾಜ ದಯಾಸಾಗರ, ದಸಾಪ ತಾಲೂಕಾಧ್ಯಕ್ಷ ಶಿವರಾಜ ಡಿ.ಮೇತ್ರೆ, ಕಲಾವಿದ ಡಾ.ಸಿದ್ರಾಮ ಡಿ ವಾಘಮಾರೆ, ಸಾಹಿತಿ ಶ್ರೀಕಾಂತ ಸೂಗಿ, ಐ.ಎಸ್.ಶಕೀಲ್ ಮಾತನಾಡಿದರು.

ತಾಲೂಕಾಧ್ಯಕ್ಷರಾದ ಹುಮನಾಬಾದ-ಸಿದ್ಧಾರ್ಥ ಮಿತ್ರ, ಚಿಟಗುಪ್ಪ-ಡಾ.ಸಂಗೀತಾ ಪಾಟೀಲ, ಬೀದರ- ಡಾ.ಸುನೀತಾ ಪಂಕಜ ,ಕಮಲನಗರ-ಗಣಪತಿ ದಶರಥ, ಭಾಲ್ಕಿ-ಬಾಲಾಜಿಯವರನ್ನು ಸನ್ಮಾನಿಸಿಲಾಯಿತು. ವಿ.ಎಂ.ಬಂಕಲಗಿ,ಈಶ್ವರ ತಡೋಳಾ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News