ಬೀದರ್ | ಬಸವಣ್ಣನ ಮೂರ್ತಿಗೆ ಅವಮಾನ; ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು

Update: 2025-01-15 10:03 GMT

ಬೀದರ್ : ಬಸವಣ್ಣರ ಪ್ರತಿಮೆಯ ಕೈ ಮುರಿದ ಘಟನೆ ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿ ನಡೆದಿದ್ದು, ಕೃತ್ಯದ ವಿರುದ್ಧ ನಡೆಸುತಿದ್ದ ಪ್ರತಿಭಟನೆ ಕೈ ಬಿಡಲಾಗಿದೆ.

ತಡರಾತ್ರಿ ನಡೆದ ಈ ಘಟನೆಯ ವಿರುದ್ಧ ಇಂದು ಬೆಳಿಗ್ಗೆ ಭಾಲ್ಕಿ-ಹುಮನಾಬಾದ-ಬಸವಕಲ್ಯಾಣ ಮುಖ್ಯ ರಸ್ತೆ ತಡೆದು ದಾಡಗಿ ಗ್ರಾಮದ ಬಸವ ಅನುಯಾಯಿಗಳು ಪ್ರತಿಭಟನೆ ನಡೆಸುತ್ತಿದ್ದರು. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಭಾಲ್ಕಿಯ ತಹಶೀಲ್ದಾರ್, ಡಿವೈಎಸ್ಪಿ ಹಾಗೂ ಖಟಕಚಿಂಚೋಳಿ ಪೊಲೀಸ್ ಠಾಣೆಯ ಪಿ ಎಸ್ ಐ, 45 ದಿನದಲ್ಲಿ ಬಸವಣ್ಣನವರ ಹೊಸ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುವುದು ಹಾಗೂ ಎರಡು ದಿನದಲ್ಲಿ ಪ್ರತಿಮೆ ಇದ್ದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ಒಪ್ಪಿಕೊಂಡ ಪ್ರತಿಭಟನಾಕಾರರು, ರಸ್ತೆ ತಡೆದು ನಡೆಸುತಿದ್ದ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಭಟನೆ ಕೈ ಬಿಟ್ಟ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಸ್ಥಗಿತವಾಗಿದ್ದ ರಸ್ತೆಯು ಯಥಾಸ್ಥಿತಿಗೆ ಮರಳಿದ್ದು, ಸುಗಮ ಸಂಚಾರ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಖಟಕಚಿಂಚೋಳಿ ಪಿ ಎಸ್ ಐ ಮಾಹಿತಿ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News