ಬೀದರ್ | ಕನಕದಾಸರು ಜಾತಿ ವ್ಯವಸ್ಥೆಯಲ್ಲಿ ಮೇಲು ಕೀಳು ಎಂಬ ಭಾವನೆ ಹೋಗಲಾಡಿಸಲು ಪ್ರಯತ್ನಿಸಿದರು : ಸಚಿವ ಈಶ್ವರ್ ಖಂಡ್ರೆ
ಬೀದರ್ : ಭಕ್ತ ಶ್ರೇಷ್ಠ ಕನಕದಾಸರು 15-16ನೇ ಶತಮಾನದಲ್ಲಿ ಕೀರ್ತನೆ, ಕಾವ್ಯಗಳ ಮುಖಾಂತರ ಅನೇಕ ಕೃತಿಗಳನ್ನು ರಚನೆ ಮಾಡಿ ಅದರ ಮುಖಾಂತರ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ, ಸಮಾಜ ಸುಧಾರಣೆ, ಜಾತ್ಯಾತಿಥ ಸಮಾಜ ಮಾಡಲು ಅಂದಿನ ಜಾತಿ ವ್ಯವಸ್ಥೆಯಲ್ಲಿ ಮೇಲು ಕೀಳು ಎಂಬ ಭಾವನೆ ಹೋಗಲಾಡಿಸಲು ಪ್ರಯತ್ನಿಸಿದರು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ.ಖಂಡ್ರೆ ಹೇಳಿದ್ದಾರೆ.
ಅವರು ಭೋಮ್ಮಗೊಂಡೇಶ್ವರ ವೃತ್ತದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಣೆಯನ್ನು ನಿವಾರಣೆ ಮಾಡಿ ಮನುಕುಲವನ್ನು ಒಂದು ಮಾಡಿ, ʼಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ, ಜೀವಕ್ಕೆ ಕುಲವಿದೆಯಾ, ಆತ್ಮಕ್ಕೆ ಕುಲವಿದೆಯಾʼ ಎಂದು ತಮ್ಮ ಸಂಪತ್ತು, ಸಂಸಾರ ತ್ಯಾಗ ಮಾಡಿ ಕೀರ್ತನೆ ಮೂಲಕ ರಾಜ್ಯಾದ್ಯಂತ ಸುತ್ತಾಡಿ ಸಮಾಜ ಸುಧಾರಣೆ ಮಾಡಿ ನಮಗೆಲ್ಲರಿಗೂ ಆದರ್ಶಗಳನ್ನು ನೀಡಿದ್ದಾರೆ. ಅವರು ಕೊಟ್ಟಂತಹ ವಿಚಾರ ಧಾರೆಗಳನ್ನು ನಾವೇಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೊಣ್ಣ ಎಂದರು.
ಕಾರ್ಯಕ್ರಮಕ್ಕೂ ಮುಂಚೆ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ರಂಗಮಂದಿರವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪೌರಾಡಳಿತ ಹಜ್ ಸಚಿವರಾದ ರಹೀಮ್ಖಾನ್, ಬೀದರ್ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರಾದ ಬಂಡೆಪ್ಪಾ ಕಾಶಂಪೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚೀಮಕೋಡ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ನಗರಸಭೆ ಅಧ್ಯಕ್ಷರಾದ ಎಂ.ಡಿ.ಗೌಸ್, ಮುಖಂಡರಾದ ಬಾಬುರಾವ್ ಮಲ್ಕಾಪೂರೆ, ಮಲ್ಲಿಕಾರ್ಜುನ ಪರಿಹಾರ, ಮಾಳಪ್ಪ ಅಡಸಾರೆ, ಪಂಡಿತ ಚಿದ್ರಿ, ಶಶಿ ಹೊಸಳ್ಳಿ, ಈಶ್ವರಸಿಂಗ ಠಾಕೂರ್, ನಗರಸಭೆ ಸದಸ್ಯರಾದ ಹಣಮಂತ ಮಲ್ಕಾಪೂರ, ಬಸವರಾಜ ಹೆಡೆ, ಪೀರಪ್ಪ ಯರನಳ್ಳಿ, ಲಲಿತಾ ಕರಂಜಿ, ರಾಜಕುಮಾರ ಕಂದಗೋಳ, ಸೋಮಶೇಖರ ಚಿದ್ರಿ, ತುಕಾರಾಮ ಚಿದ್ರಿ, ಗಣಪತಿರಾವ್ ಸೋಲಪುರ, ನಾಗರಾಜ ನಂದಗಾವ, ವಿಜಯಕುಮಾರ ಖಾಸೆಂಪುರ, ಬಸವರಾಜ ಮಾಳಗೆ, ಚಂದ್ರಕಾಂತ್ ಹಿಪ್ಪಳಗಾಂವ ಸೇರಿದಂತೆ ಭಕ್ತ ಕನಕದಾಸರ ಅಭಿಮಾನಿಗಳು, ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.