ಬೀದರ್ | ಕಾರಂಜಾ ಸಂತ್ರಸ್ತರ ಹೋರಾಟ : ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ

Update: 2024-12-01 07:52 GMT

ಬೀದರ್ : ಇಲ್ಲಿನ ಕಾರಂಜಾ ಮುಳುಗಡೆ ಸಂತ್ರಸ್ತರು 35 ವರ್ಷಗಳಿಂದ ಸತತ ಹೋರಾಟ ಮಾಡುತ್ತಿದ್ದರೂ, ಜಿಲ್ಲಾಡಳಿತವು ನಮ್ಮನ್ನು ಪರಿಗಣಿಸುತ್ತಿಲ್ಲ.15 ದಿನಗಳಲ್ಲಿ ಸಮನಾಂತರ ವೈಜ್ಞಾನಿಕ ಪರಿಹಾರ ಒದಗಿಸುವ  ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾನಿರತ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಕಳೆದ 872 ದಿನಗಳಿಂದ ಕಾರಂಜಾ ಸಂತ್ರಸ್ತರು ಸತತವಾಗಿ ಧರಣಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. 2018ರಿಂದ ಜಿಲ್ಲಾಧಿಕಾರಿ ಕಚೇರಿಯ ಎದುರುಗಡೆ ಧರಣಿ ಮಾಡುತ್ತಿದ್ದಾಗ ಧರಣಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಕೊಟ್ಟು, ರಾಜ್ಯದಲ್ಲಿ ನಮ್ಮ ಸರಕಾರ ಬಂದಾಗ ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ನಮ್ಮ ಬೇಡಿಕೆಗಳಿಗಾಗಿ 872 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ನಮ್ಮ ಬೇಡಿಕೆಗಳು ಇಲ್ಲಿಯವರೆಗೆ ಈಡೇರಿಸಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇದ್ದಾಗ, ಧರಣಿ ಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಅವರು ಭೇಟಿ ಕೊಟ್ಟು, ದಾಖಲೆಗಳನ್ನು ಪರಿಶೀಲಿಸಿ ಬೆಂಗಳೂರಿನಲ್ಲಿ ಒಂದು ಸಭೆಯನ್ನು ಕರೆದಿದ್ದು, ಧರಣಿ ಹಿಂಪಡೆದುಕೊಳ್ಳಿ, ನಾವು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೇ ಸಚಿವರ ಆಶ್ವಾಸನೆ ಬರೀ ಆಶ್ವಾಸನೆಯಾಗಿ ಉಳಿದಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈಶ್ವರ್ ಖಂಡ್ರೆ ಯವರು, ವಿಧಾನಸಭೆಯಲ್ಲಿ ಚರ್ಚೆ ಮಾಡಿ, ಬೇಡಿಕೆಯನ್ನು ಈಡೇರಿಸುವಂತೆ ಬೊಮ್ಮಾಯಿ ಸರಕಾರಕ್ಕೆ ಒತ್ತಾಯಿಸಿದ್ದರು ಎಂದು ಹೋರಾಟಗಾರರು ವಿವರಿಸಿದ್ದಾರೆ.

ಅದರೇ, ಯಾರೂ ಕೂಡ ಇದುವರೆಗೆ ಕಾರಂಜಾ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಅಧಿಕಾರಿಯಾಗಲೀ, ಶಾಸಕರಾಗಲೀ ಅಥವಾ ಸಚಿವರಾಗಲಿ ಯಾರೂ ಇಲ್ಲ. 15 ದಿವಸಗಳ ಒಳಗಾಗಿ ಆಸ್ತಿಗಳು ಕಳೆದುಕೊಂಡು ಕುಟುಂಬಗಳು ಬೀದಿ ಪಾಲಾದ ಕಾರಂಜಾ ಸಂತ್ರಸ್ತರ ಸಮನಾಂತರ ವೈಜ್ಞಾನಿಕ ಪರಿಹಾರ ನೀಡದಿದ್ದಲ್ಲಿ, ಕಾರಂಜಾ ಮುಳುಗಡೆಯ 28 ಗ್ರಾಮಗಳ ಕಾರಂಜಾ ಸಂತ್ರಸ್ತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದಾರೆ ಎಂದು ಕಾರಂಜಾ ಮುಳುಗಡೆ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಕಾರ್ಯದರ್ಶಿನಾಗಶೆಟ್ಟಿ ಹಚ್ಚಿ, ನಿರ್ದೇಶಕರಾದ ರಾಜಕುಮಾರ್ ಕಮಲಪೂರೆ, ಮಾದಪ್ಪಾ ಖೌದೆ, ಸಂಗಾರೆಡ್ಡಿ ಔರಾದ್, ಯುಸುಫ್ ಮಿಯಾ ರೇಕುಳಗಿ, ರಾಜಶೇಖರ್ ಖಣಿರಂಜೋಳ್, ಚಂದ್ರಶೇಖರ್ ಮುತ್ತಣ್ಣಾ, ಲಕ್ಷ್ಮಿಬಾಯಿ ಖೌದೆ ಮುಂತಾದವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News