ಬೀದರ್ | ಮಂದಿರ, ಮಸೀದಿ ಹೆಸರಲ್ಲಿ ಗಲಾಟೆ ಮಾಡುವುದು ಅಧರ್ಮ : ಮುಹಮ್ಮದ್ ಕುಂಞಿ

Update: 2024-12-15 16:38 GMT

ಬೀದರ್ : ಸಮಾಜದಲ್ಲಿ ಮಂದಿರ ಮತ್ತು ಮಸೀದಿಯ ಹೆಸರಲ್ಲಿ ಮನುಷ್ಯನ ರಕ್ತ ಹರಿಯಬಾರದು, ಮಸೀದಿ ಮತ್ತು ಮಂದಿರಗಳ ವಿಷಯದಲ್ಲಿ ಗಲಾಟೆ ಮಾಡುವುದು ಅಧರ್ಮ ಎಂದು ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞಿ ಹೇಳಿದ್ದಾರೆ.

ಬಸವಕಲ್ಯಾಣ ನಗರದ ಸಭಾ ಭವನದಲ್ಲಿ ʼಜಮಾಅತೆ ಎ ಇಸ್ಲಾಮಿ ಹಿಂದ್ʼ ವತಿಯಿಂದ ಆಯೋಜಿಸಲಾದ ʼಮೂರುದಿನಗಳ ಕುರ್ ಆನ್ ಪ್ರವಚನದ ವಿಶೇಷ ಉಪನ್ಯಾಸʼ ನೀಡಿ ಮಾತನಾಡಿದರು.

ಮಸೀದಿ ಮಂದಿರದ ವಿಷಯದಲ್ಲಿ ಭಿನ್ನತೆ ಉಂಟಾಗಬಾರದು ಎಂಬುದು ಜಗತಿಗೆ ಎಲ್ಲಾ ಧರ್ಮಗಳು ಕಲಿಸಿಕೊಟ್ಟ ಮೌಲ್ಯದ ಪಾಠವಾಗಿದೆ. ನಮ್ಮ ಬದುಕಿನ ಬಗ್ಗೆ ಅವಲೋಕನ ಮಾಡಿಕೊಂಡಾಗ ಮಾತ್ರ ಧರ್ಮಗಳ್ಳಿನ ಮೌಲ್ಯಗಳು ಅರಿಯಲು ಸಾಧ್ಯ ಎಂದರು.

ಆತ್ಮದ ಸೌಂದರ್ಯ ಕೆಟ್ಟಾಗ ಅಂಧಕಾರ ಉಳಿಯುತ್ತದೆ. ಅದಕ್ಕಾಗಿ ಆತ್ಮವನ್ನು ಭರವಸೆಯಿಂದ ಬೆಳಕಾಗಿಸಬೇಕು. ನಾನು ಯಾರು ಎಂದು ಅರಿತಾಗ ಮಾತ್ರ ಬದುಕಿನ ಉದ್ದೇಶ ತಿಳಿಯಲು ಸಾಧ್ಯ. ಸುಖ ಸವಲತ್ತುಗಳು ತಾತ್ಕಾಲಿಕ. ಒಂದು ಅವಧಿಗೆ ಮಾತ್ರ ಸಿಮೀತವಾಗಿವೆ. ಅವಧಿ ಮುಗಿದ ತಕ್ಷಣ ಈ ಭೂಮಿಯನ್ನು ತ್ಯಜಿಸಲೇಬೇಕು ಎಂದರು.

ಜಮಾಅತೆ ಇಸ್ಲಾಮಿ ಎ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊ.ಸಲೀಮೊದ್ದೀನ್ ಇಂಜಿನಿಯರ್ ಮಾತನಾಡಿ, ಇಸ್ಲಾಂ ಅಂದರೆ ದೇವನಿಗೆ ಸಮರ್ಪಣೆ ಮಾಡಿಕೊಳ್ಳುವುದು. ಮಾನವ ಕಲ್ಯಾಣಕ್ಕಾಗಿ ಶ್ರಮಿಸುವುದು, ಎಲ್ಲರ ಒಳಿತು ಬಯಸುವುದು ಮಾನವನ ಪರಮ ಧರ್ಮವಾಗಿದೆ ಎಂದರು.

ಮೂರು ದಿನಗಳ ಕುರ್ ಆನ್ ಪ್ರವಚನ ನಿಮಿತ್ತ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ವತಿಯಿಂದ ಮ್ಯಾರಥಾನ್ ಸ್ಪರ್ಧೆ ಮತ್ತು ಕುರ್ ಆನ್ ಎಕ್ಸ್ಪೋ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಖಾಜಾ ಬಂದಾ ನವಾಜ್ ದರ್ಗಾದ ನೂತನ ಪೀಠಾಧಿಪತಿ ಹಝ್ರತ್ ಸೈಯದ್ ಶಾ ಅಲಿ ಅಲ್ ಹುಸೈನಿ, ಕಲ್ಯಾಣ ಮಹಾಮನೆಯ ಶ್ರೀ ಸಾದ್ ಗುರು ಬಸವ ಪ್ರಭು ಸ್ವಾಮಿಜಿ, ಕುರ್ ಆನ್ ಪ್ರವಚನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಮುಜಾಹಿದ್ ಪಾಷಾ ಖುರೇಶಿ, ಸಿಎಂ ಇಬ್ರಾಹಿಂ, ಇಲ್ಯಾಸ್ ಸೇಠ್ ಬಾಗಬಾನ್, ಕಲೀಮ್ ಆಬಿದ್ ಮನ್ಸೂರಿ ಸಾಬ್, ಹಫೀಝ್ ಮೌಲಾನಾ ಇಝಹಾರುಲ್ ಹಕ್ ಖಾಸಮಿ, ಮಾಣಿಕಪ್ಪಾ ಸಂಗನಮಟೆ, ಹಫೀಝ್ ಮುಹಮ್ಮದ್ ಮುಜಾಹಿದ್, ತಹಶೀಲ್ದಾರರಾದ ಶಿವಾನಂದ ಮಟೆ, ಧನರಾಜ್ ತಲ್ಲಮಪಲ್ಲಿ, ಮಿನಾಜ್ ಭೋಲೆ, ಜುಲಫೇಕಾರ್ ಅಹ್ಮದ್ ಚಾಪುಸಕರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News