ಬೀದರ್ | ತಾಂತ್ರಿಕ ಜೀವನದ ಬದುಕಿನಲ್ಲಿ ಶಾಂತಿಗಾಗಿ ಸಂಗೀತ ಬೇಕು : ಸಿದ್ರಾಮ್ ಸಿಂಧೆ

Update: 2024-11-21 17:59 GMT

ಬೀದರ್ : ತಾಂತ್ರಿಕ ಜೀವನದ ಒತ್ತಡದ ಮಧ್ಯೆ ಬದುಕುತ್ತಿರುವ ನನಗೆ ಮತ್ತು ನಿಮ್ಮೆಲ್ಲರಿಗೂ ಮಾನಸಿಕ ಶಾಂತಿ, ನೆಮ್ಮದಿ, ಮತ್ತು ಸಮಾಧಾನ ಸಂಗೀತದಿಂದ ದೊರಕುತ್ತದೆ ಮತ್ತು ಮರೆಯಾಗುತ್ತಿರುವ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆಯವರು ಹೇಳಿದ್ದಾರೆ.

ನಗರದ ಚೆನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ 2023-2024ನೇ ಸಾಲಿನ ಸಂಘ ಸಂಸ್ಥೆಗಳ ಧನ ಸಹಾಯ ವಿಶೇಷ ಘಟಕ ಯೋಜನೆಯಡಿ ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಮಾಳಚಾಪೂರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಸಂಗೀತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮೊಬೈಲ್ ಬಳಸದಂತೆ ಸೂಕ್ತ ಮಾಹಿತಿ ನೀಡಿ ಟಿವಿಯಿಂದ ದೂರವಿರಿಸಿ ಸಂಗೀತದ ಆಸಕ್ತಿ ಮೈಗೂಡಿಸಿಕೊಳ್ಳುವಂತೆ ಮಾಡಿದರೆ ಮಕ್ಕಳು ಓದಿನತ್ತ ಏಕಚಿತ್ತ ಪಡೆದುಕೊಂಡು ತಾವೂ ಬಯಸುವ ಉನ್ನತ ಶಿಕ್ಷಣದೊಂದಿಗೆ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬಹುದಾಗಿದೆ ಎಂದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ್ ಅತಿವಾಳೆ, ಜನಪದ ಅಕ್ಯಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಜೈ ಭಾರತ್ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ನಿರಗುಡಿ ಮಲ್ಲಿನಾಥ್ ಮಹಾರಾಜ್, ಸರಸ್ವತಿ ದೊಡ್ಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನರಸಿಂಹಲು ಡಪ್ಪೂರ್, ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ, ಹಿರಿಯ ಕಲಾವಿದ ಶೇಶಿರಾವ್ ಬೆಳಕುಣಿ, ಗೌತಮ್ ಅರಳಿ, ಮಹೇಬೂಬ್ ವಸ್ತಾದ್, ಸುನೀಲ್ ಭಾವಿಕಟ್ಟಿ, ಸಂತೋಷ್ ಜೋಳದಾಪಕೆ, ಪಪ್ಪು ಪಾಟೀಲ್ ಖಾನಾಪೂರ್, ಕು.ಕ್ಲಾಮೆಂಟಿನ್, ನವಲಿಂಗ್ ಪಾಟೀಲ್, ರವಿ ಗಾಯಕವಾಡ್, ಬಸವರಾಜ್ ಕಟ್ಟಿಮನಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಎಸ್.ಬಿ. ಕುಚಬಾಳ್ ಅವರು ಸ್ವಾಗತಿಸಿದರು. ದಿಲೀಪ್ ಮೋಗಾ ಅವರು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ದೊಡ್ಡಿ ಅವರು ವಂದಿಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News