ಬೀದರ್ | ನಿಟ್ಟುರ್ (ಬಿ) ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
ಬೀದರ್ : ಭಾಲ್ಕಿ ತಾಲ್ಲೂಕಿನ ನಿಟ್ಟುರ್ (ಬಿ) ಗ್ರಾಮ ಪಂಚಾಯಿತ್‌ನ ನೂತನ ಅಧ್ಯಕ್ಷರಾಗಿ ಜ್ಯೋತಿ ಅನಿಲಕುಮಾರ ಸಕ್ರೆಪ್ಪನೋರ್ ಮತ್ತು ಉಪಾಧ್ಯಕ್ಷರಾಗಿ ರಾಜಕುಮಾರ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಟ್ಟೂರ್ (ಬಿ) ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗುರುವಾರ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಅನಿಲಕುಮಾರ ಸಕ್ರೆಪ್ಪನೋರ್ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ರಾಜಕುಮಾರ ಪಾಟೀಲ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವರ ವಿರುದ್ಧ ಯಾವುದೇ ಸದಸ್ಯರು ಅರ್ಜಿ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸೂರ್ಯಕಾಂತ ಬಿರಾದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದನ್ನು ಪ್ರಕಟಿಸಿದರು.
ನೂತನ ಅಧ್ಯಕ್ಷ ಜ್ಯೋತಿ ಅನಿಲಕುಮಾರ (ಷಣಮುಖ) ಸಕ್ರೆಪ್ಪನೋರ್ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳು. ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಅನಿತಾ ಲೋಬಾಜಿ, ಮಾಜಿ ಉಪಾಧ್ಯಕ್ಷರಾದ ಮಹೇಶ ಬಿರಾದಾರ, ಮುಖಂಡರಾದ ಬಾಬುರಾವ ಪಾಟೀಲ್, ಪಾಂಡುರಂಗ ಕಣಜೆ, ಜನಾರ್ಧನ್ ಕಣಜೆ, ಮಲ್ಲಿಕಾರ್ಜುನ ಸಕ್ರೆಪ್ಪನೋರ್, ತುಕಾರಾಮ ದೊಡ್ಡಿ, ಕಲೀಮ್ ಚಾಚಾ ಹಾಗೆಯೇ ನಿಟ್ಟೂrb ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರ ಸೇರಿದಂತೆ ನಿಟ್ಟೂರ, ಹಜನಾಳ, ಕೊಟಗ್ಯಾಳ ಗ್ರಾಮದ ಹಲವರು ಪ್ರಮುಖರು ಇದ್ದರು.