ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಬೀದರ್ : ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಹುಲಸೂರ್ ತಾಲ್ಲೂಕು ಹೋರಾಟ ಸಮಿತಿಯಿಂದ ಇಂದು ಹುಲಸೂರ್ ಪಟ್ಟಣ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
ಇಂದು ಹುಲಸೂರ್ ತಾಲ್ಲೂಕು ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ರಾಜೊಳೆ ಅವರ ನೆತೃತ್ವದಲ್ಲಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಪಟ್ಟಣದ ಭವಾನಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹುಲಸೂರ್ ಪಟ್ಟಣ ಬಂದ್ ಮಾಡುವ ಮೂಲಕ ಉಪವಾಸ ಸತ್ಯಾಗ್ರಹ ನಡೆಸಿದರು.
ಎಂ.ಬಿ ಪ್ರಕಾಶ್ ಆಯೊಗದಂತೆ ಹುಲಸೂರ್ ತಾಲ್ಲೂಕಿಗೆ ಸಂಪೂರ್ಣ 62 ಹಳ್ಳಿ ಹಾಗೂ 20 ಗ್ರಾಮ ಪಂಚಾಯಿತಿಗಳು ಸೆರ್ಪಡೆ ಮಾಡಬೇಕು. ಹುಲಸೂರು ತಾಲ್ಲೂಕು ಎಂದು ಘೊಷಣೆಯಾಗಿ ಏಳರಿಂದ ಎಂಟು ವರ್ಷ ಕಳೆದರೂ ಕೂಡ ಇನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದು ಕೂಡಲೇ ಪಟ್ಟಣ ಪಂಚಾಯತ್ ಅಥವಾ ಪುರಸಭೆಗೆ ಮೆಲ್ದರ್ಜೆಗೆ ಏರಿಸಬೆಕು. ಇಲ್ಲಿ ತಾಲ್ಲೂಕು ಮಟ್ಟದ ಕಚೇರಿಗಳು ಕೂಡಲೇ ಪ್ರಾರಂಭ ಮಾಡಬೇಕು. ಬಸವಕಲ್ಯಾಣ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹುಲಸೂರ್ ತಾಲ್ಲೂಕು ಹೊರಾಟ ಸಮಿತಿ ಸಂಚಾಲಕ ಎಂ.ಜಿ ರಾಜೊಳೆ ಅವರು ಮಾತನಾಡಿ, ಎಂ.ಬಿ ಪ್ರಕಾಶ್ ಆಯೊಗದಂತೆ ಕೂಡಲೇ ಹುಲಸೂರ್ ತಾಲ್ಲೂಕಿಗೆ ಉಳಿದ ಹಳ್ಳಿಗಳು ಸೆರ್ಪಡೆಗೊಳಿಸಬೇಕು. ಹಾಗೆಯೇ ಉಳಿದ ಬೇಡಿಕೆಗಳು ಸಹ ಕೂಡಲೇ ಈಡೇರಿಸಬೇಕು. ಕಾಣದ ಕೈಗಳು ಬೇಡಿಕೆ ಈಡೇರಿಕೆಗೆ ವಿರೋಧ ಮಾಡುತ್ತಿವೆ. ನಾವು ಹಲವು ವರ್ಷಗಳಿಂದ ಹೊರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಇದೂವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಕಣ್ಣು ಮತ್ತು ಕಿವಿ ಕೆಲಸ ಎರಡು ಮಾಡುತ್ತಿಲ್ಲ. ಇಂತಹ ವಿಷಯಗಳಲ್ಲಿ ಯಾರು ರಾಜಕೀಯ ಮಾಡಬಾರದು. ಇನ್ನೊಬ್ಬರ ಭಾವನೆ ಮತ್ತು ಹಕ್ಕುಗಳ ಜೊತೆ ಆಟವಾಡಬಾರದು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ನಾನು ಆತ್ಮಹತ್ಯೆಗೆ ಶರಣಾಗುತ್ತೆನೆ ಎಂದು ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಭಗವಂತ್ ಖೂಬಾ ಅವರು ಮಾತನಾಡಿ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹುಲಸೂರ್ ತಾಲ್ಲೂಕಿನ ಜನತೆಯ ಹಕ್ಕು ಮತ್ತು ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸಿದಾಗಲೇ ಜನರ ಹೃದಯದಲ್ಲಿ ಉಳಿಯಲು ಸಾಧ್ಯ. ಅಧಿಕಾರ ಶಾಶ್ವತವಲ್ಲ, ಮಾನವಿಯತೆ ಮುಖ್ಯವಾಗಿದೆ. ಇಲ್ಲಿನ ಜನ ತಮ್ಮ ಬೆಡಿಕೆಗಳಿಗಾಗಿ ನಿರಂತರ ಹೊರಾಟ ಮಾಡುತ್ತಿದ್ದು, ಬಸವಕಲ್ಯಾಣ ಜಿಲ್ಲಾ ಹಾಗೂ ಹುಲಸೂರ್ ತಾಲ್ಲೂಕು ಮಾಡಬೇಕು. ಇಲ್ಲದಿದ್ದರೆ ಜನ ಆತ್ಮಹತ್ಯೆ ಮಾಡಿಳ್ಳುವುದಾಗಿ ಹೆಳುತ್ತಿದ್ದಾರೆ. ಆದರೆ ತಾವು ಸೌಜನ್ಯಕ್ಕಾದರೂ ಅವರ ಜೊತೆ ಮಾತನಾಡಿ ಧೈರ್ಯ ತುಂಬುವ ಕೆಲಸ ಮಾಡಬಹುದಿತ್ತು ಎಂದು ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಕೂಡಲೇ ಎಂ.ಬಿ ಪ್ರಕಾಶ್ ಆಯೊಗದಂತೆ ಹುಲಸೂರ್ ಜನತೆಯ ಬೇಡಿಕೆ ಈಡೆರೀಸಬೆಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೊರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸುಧಿರ್ ಕಾಡಾದಿ, ಅನಿಲ್ ಭೂಸಾರೆ ,ಆಕಾಶ್ ಖಂಡಾಳೆ, ಶಬ್ಬಿರ್ ಪಾಶಾ,ಪ್ರವೀಣ್ ಕಡಾದಿ, ನಾಗೇಶ್ ಮೆತ್ರೆ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
