ಬೀದರ್ | ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಪ್ರಕರಣ : ಮೂವರ ಬಂಧನ

Update: 2025-04-15 18:32 IST
ಬೀದರ್ | ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಪ್ರಕರಣ : ಮೂವರ ಬಂಧನ
  • whatsapp icon

ಬೀದರ್ : ಇತ್ತೀಚಿಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ಶೈಜ್ ಚೌಠಾಯಿ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದ್ದು, 1 ಲಕ್ಷ 70 ಸಾವಿರ ರೂ. ಕ್ಕಿಂತ ಹೆಚ್ಚಿನ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.

ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣ ಬೇಧಿಸಲು ನಾವು ಮೂರು ತಂಡಗಳನ್ನು ರಚಿಸಿದ್ದೇವೆ. ಅದರಲ್ಲೂ ಬಹುಮುಖ್ಯವಾಗಿ ಎಐ ಕಮ್ಯಾಂಡ್ ಸೆಂಟರ್ ನ ಉಪಯೋಗ ತುಂಬಾ ಆಗಿದೆ. ಇದರಿಂದ ಮಹತ್ವದ ಸುಳಿವುಗಳು ನಮಗೆ ದೊರೆತಿದ್ದು ಆರೋಪಿಗಳಿಗೆ ಬಂಧಿಸಲು ಸಹಕಾರಿಯಾಗಿವೆ ಎಂದು ಹೇಳಿದರು.

ಆರೋಪಿಗಳು ಪಾರ್ದಿ ಗ್ಯಾಂಗ್ ಗೆ ಸೇರಿದವರಾಗಿದ್ದಾರೆ. ಇದರಲ್ಲಿ ಇಬ್ಬರು ಮಹಾರಾಷ್ಟ್ರದ ಔರಂಗಾಬಾದ್ ಮೂಲದವರಗಿದ್ದು, ಒಬ್ಬ ಮಧ್ಯಪ್ರದೇಶದ ನಿವಾಸಿಯಾಗಿದ್ದಾನೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದರು.

ಆರೋಪಿಗಳ ಹತ್ತಿರದಿಂದ 80 ಸಾವಿರ ರೂ. ಮೌಲ್ಯದ ಬಂಗಾರದ ಚೈನ್, 80 ಸಾವಿರ ರೂ. ಮೌಲ್ಯದ ಎರಡು ಬಂಗಾರದ ಬಳೆಗಳು, 10,200 ರೂ. ಮೌಲ್ಯದ ಬೆಳ್ಳಿ ಉಂಗುರು, 6,800 ರೂ. ಮೌಲ್ಯದ ಬೆಳ್ಳಿ ಚೈನ್ ಸೇರಿದಂತೆ ಇತರ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜ.1 ರ ಮಧ್ಯರಾತ್ರಿ ಅಪರಿಚಿತ ಕಳ್ಳರು ನ್ಯಾಯಧೀಶರ ಸರ್ಕಾರಿ ವಸತಿ ಗೃಹದ ಬಾಗಿಲು ಮುರಿದು ಮನೆಗೆ ನುಗ್ಗಿ ಒಟ್ಟು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News