ನನ್ನ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ : ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
ಬೀದರ್ : ನನ್ನ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ನಿರ್ಣಾ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನದ ಬಳಿ 25 ಲಕ್ಷ ರೂ. ವೆಚ್ಚದ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಪರಿಪೂರ್ಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಮೊದಲು ಅಭಿವೃದ್ಧಿಕಾರ್ಯಗಳು ಮಾಡಿ ಜನರ ಕಣ್ಣಲ್ಲಿ ಸಂತೋಷ ಮತ್ತು ಸಂತೃಪ್ತಿ ಕಾಣಬೇಕೆಂದು ಬಯಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಜಾರಿಗೆ ಬರುವ ಯೋಜನೆಗಳು ಕ್ಷೇತ್ರಕ್ಕೆ ತರುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುವೆ. ನನ್ನ ಬಳಿ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಹಾಗೆಯೇ ನಾನೇ ಖೂದ್ದಾಗಿ ಜನರ ಬಳಿ ಹೋಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದರು.
ಕಾನೂನಿನ ಚೌಕಟ್ಟಿನಲ್ಲಿ ಯಾವ ಕೆಲಸಗಳು ಆಗಬೇಕಾಗಿದೆಯೋ ಅವುಗಳನ್ನು ಮಾಡುತ್ತಿರುವೆ. ಇಲ್ಲಿವರೆಗೆ ಮಾಡಿದಂತಹ ಅಭಿವೃದ್ಧಿ ಕೆಲಸದ ವರದಿ ತರಿಸಿ ಪರಿಶೀಲಿಸುತ್ತಿದ್ದೇನೆ ಎಂದು ತಿಳಿಸಿದ ಅವರು, ಅಧಿಕಾರಿಗಳಿಗೆ ಉತ್ತಮವಾಗಿ ಕೆಲಸ ಮಾಡಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್ ಪದ್ದಾರ, ಚನ್ನಬಸಪ್ಪ ಸೊಪ್ಪಣ್ಣ, ಮಾಣಿಕಪ್ಪ ಕಾಶಂಪುರೆ, ವೀರಶೆಟ್ಟಿ ಬದ್ರಪ್ಪನೋರು, ರವಿ ಸ್ವಾಮಿ, ಶಿವಕುಮಾರ್ ಮೈಲೂರು, ಚಂದ್ರಶೇಖರ್ ಪಾಟೀಲ್, ಬಸವರಾಜ ಬಸೆಟ್ಟಿ, ಶರಣು ಖಾಶೆಂಪುರ, ಹಮೀದ್, ಶರಣಕುಮಾರ್ ಪೊಲೀಸ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.