ಬೀದರ್ | ಲೋಕಾಯುಕ್ತ ದಾಳಿ; ಬುಡಾ ಆಯುಕ್ತರು ಸೇರಿ ಮೂವರ ಬಂಧನ
ಬೀದರ್: ಬೀದರ್ ಅಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ನಿರ್ಮಾಣವಾಗಿರುವ 60% ನಿವೇಶನಕ್ಕೆ ಅನೂಮೋದನೆ 10 ಲಕ್ಷ ರೂ. ಲಂಚ ಪಡೆಯುತ್ತಿರುವಾಗಲೇ ಬುಡಾ ಆಯುಕ್ತ ಮತ್ತು ಯೋಜನಾ ಸದಸ್ಯ ಸೇರಿ ಮೂವರ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಬೀದರ್ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಶ್ರೀಕಾಂತ್ ಚಿಮ್ಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ ಹಾಗೂ ಆಪ್ತ ಸಿದ್ದು ಹೂಗಾರ ಲೋಕಾಯುಕ್ತರ ಬಲೆಗೆ ಬಿದ್ದವರು. ಬುಡಾ ಕಮೀಷನರ್ ಶ್ರೀಕಾಂತ ಚಿಮ್ಮಕೋಡೆ ಮತ್ತು ಸತೀಶ್ ನೌಬಾದೆ ಅವರ ಬುಡಾದಿಂದ ಲೇಔಟ್ ಪೂರ್ಣಗೊಂಡಿರುವ ನಿವೇಶನದ 60% ಅನೂಮೋದನೆ ನೀಡಲು 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಸತೀಶ್ ನೌಬಾದೆ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 50 ಲಕ್ಷ ಬೇಡಿಕೆಯ ಮುಂಗಡ 10 ಲಕ್ಷ ರೂ. ಹಣ ಬುಡಾ ಆಯುಕ್ತರ ಆದೇಶದ ಮೇರೆಗೆ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಆಪ್ತ ಸಿದ್ದು ಹೂಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಳಿಕ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಬುಡಾ ಕಚೇರಿಯಲ್ಲಿನ ಲಂಚಾವತಾರದ ಬಗ್ಗೆ ಹಲವು ದೂರುಗಳು ಬಂದ ಹಿನ್ನಲೆ ಲೋಕಾಯುಕ್ತ ಎಸ್ಪಿ ಉಮೇಶ್ ಮಾರ್ಗದರ್ಶನದಲ್ಲಿ ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ್ ನೇತೃತ್ವದ ತಂಡದ ತನಿಖಾಧಿಕಾರಿ ಸಂತೋಷ ರಾಠೋಡ, ಬಾಬಾ ಸಾಹೇಬ ಪಾಟೀಲ, ಅರ್ಜುನಪ್ಪಾ, ಸಿಬ್ಬಂದಿ ವಿಷ್ಣುರಡ್ಡಿ, ಶ್ರೀಕಾಂತ, ಶಾಂತಲಿಂಗಪ್ಪಾ, ವಿಜಯಶೇಖರ, ಅಡೆಪ್ಪಾ, ಕಿಶೋರಕುಮಾರ, ಕುಶಾಲ, ಭರತ, ಶುದ್ಧೋಧನ, ಶ್ರೀಮತಿ ಸುವರ್ಣಾ ಯಶ್ವಸಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.