ಬೀದರ್, ಯಶವಂತಪುರ್ ನಡುವಿನ ರೈಲು ಪುನಾರಂಭ
Update: 2025-04-09 11:14 IST

ಬೀದರ್ : ಸಂಸದ ಸಾಗರ್ ಖಂಡ್ರೆ ಅವರ ನಿರಂತರ ಪ್ರಯತ್ನ ಮತ್ತು ಮನವಿಯ ಫಲವಾಗಿ ಸ್ಥಗಿತಗೊಂಡಿದ್ದ ಯಶವಂತ್‌ಪುರ–ಬೀದರ್ (16577/78) ರೈಲು ಸೇವೆ ಪುನರ್ ಆರಂಭವಾಗಿದೆ.
ವಾರದ ಪ್ರತಿ ಶನಿವಾರ ಬೆಂಗಳೂರಿನ ಯಶವಂತ್‌ಪುರದಿಂದ-ಬೀದರ್ ಗೆ ಪ್ರಯಾಣಿಸುವ ಈ ರೈಲು, ಮಾರನೇ ದಿನ ರವಿವಾರ ಬೀದರ್‌ನಿಂದ ಬೆಂಗಳೂರಿಗೆ ಸಂಚರಿಸಲಿದೆ.
ಸ್ಥಗಿತಗೊಂಡಿದ್ದ ಈ ರೈಲು ಸೇವೆಯನ್ನು ಪುನಾರಂಭ ಮಾಡುವಂತೆ ಸಂಸದ ಸಾಗರ ಖಂಡ್ರೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿ ಮರು ಮನವಿ ಮಾಡಿದ್ದರು. ಪ್ರಸ್ತುತ ಬೀದರ್, ಯಶವಂತ್‌ಪುರ ನಡುವೆ ರೈಲು ಸಂಚಾರ ಪುನರ್ ಆರಂಭವಾಗಿದ್ದು, ಜಿಲ್ಲೆಯ ಜನತೆಗೆ ಅನುಕೂಲವಾಗಿದೆ.