ಬೀದರ್ ಲೋಕಸಭಾ ಕ್ಷೇತ್ರದಿಂದ ಅಂಧ ವ್ಯಕ್ತಿ ನಾಮಪತ್ರ ಸಲ್ಲಿಕೆ

Update: 2024-04-12 14:39 GMT

ಬೀದರ್ : ಬೀದರ್ ಲೋಕಸಭಾ ಕ್ಷೇತ್ರದ ಅಧಿಸೂಚನೆ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನ ಅಂಧ ವ್ಯಕ್ತಿಯೊಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಬೀದರ್‌ ಜಿಲ್ಲೆಯ ಕಾಡವಾದ ಗ್ರಾಮದ ಅಂಧ ದಿಲೀಪ್‌ ನಾಗಪ್ಪ ಬೂಸಾ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.

ಬ್ರೈಲ್ ಲಿಪಿಯಲ್ಲಿ ತುಂಬಿದ ತನ್ನ ಉಮೇದುವಾರಿಕೆಯನ್ನು ತನ್ನ ಬೆಂಬಲಿಗರೊಂದಿಗೆ ಬಂದು ಸಲ್ಲಿಸಿದರು. 

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು 17 ಮತ್ತು 18ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News