ಬೀದರ್ | ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ : ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮನವಿ

Update: 2024-11-12 22:01 IST
Photo of reservoir
  • whatsapp icon

ಬೀದರ್ : ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿರುವುದರಿಂದ ಕಾಲುವೆಯ ಹತ್ತಿರ ಅಕ್ಕಪಕ್ಕದ ಜನರು, ಸಾರ್ವಜನಿಕರು ನೀರಿಗೆ ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು ಎಂದು ಬೀದರ್ ಕೆಪಿಸಿ ವಿಭಾಗ ನಂ.1,  ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವರ್ಷ ಒಂದೆ ಸಲ ಬಹಳಷ್ಟು ಮಳೆಯಾಗಿರುವುದರಿಂದ ಹೊಲಗಳು ಒಣಗಿ ಬಿರುಕುಗೊಂಡಿರುತ್ತವೆ. ಅದಕ್ಕಾಗಿ ರೈತರಿಗೆ ನೀರಿನ ಅವಶ್ಯಕತೆ ಇದೆ. ನೀರು ಕಾಲುವೆಗಳಿಗೆ ಬಿಟ್ಟರೆ ರೈತರಿಗೆ ತೊಗರಿ, ಜೋಳ ಮತ್ತು ಕಡಳೆ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಕಾಲುವೆ ಮುಖಾಂತರ ನೀರು ಬಿಡಲು ಕೇಳಿಕೊಂಡಿರುವುದರಿಂದ ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ಹಂತಹಂತವಾಗಿ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News