ಚಿಕ್ಕಮಗಳೂರು | ಮೆಸ್ಕಾಂ ನಿರ್ಲಕ್ಷ್ಯ ಆರೋಪ : 6 ಎಕರೆ ಕಾಫಿ ತೋಟ ಬೆಂಕಿಗಾಹುತಿ

Update: 2024-02-22 14:57 GMT

ಚಿಕ್ಕಮಗಳೂರು : ವಿದ್ಯುತ್ ತಂತಿಗಳಿಂದ ಬೆಂಕಿ ತಗುಲಿ ಆರು ಎಕರೆ ಕಾಫಿತೋಟ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತಾಲೂಕಿನ ಬಿಗ್ಗನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೆಸ್ಕಾಂ ಇಲಾಖಾಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯ ಆರೋಪ ತಾಲೂಕಿನ ಕೆ.ಆರ್.ಪೇಟೆ ಗ್ರಾಪಂ ವ್ಯಾಪ್ತಿಯ ಬಿಗ್ಗನಹಳ್ಳಿ ಗ್ರಾಮದ ತೇಜಸ್‍ಗೌಡ ಎಂಬವರು 6 ಎಕರೆ ಕಾಫಿ ತೋಟಕ್ಕೆ ವಿದ್ಯುತ್ ತಂತಿಯಿಂದ ಬೆಂಕಿ ತಗುಲಿ ಸಾವಿರಾರು ಕಾಫಿ ಗಿಡಗಳು ಸುಟ್ಟು ಹೋಗಿದ್ದು, ತೋಟದ ಮಾಲಕರಿಗೆ ಭಾರೀ ನಷ್ಟವಾಗಿದೆ. ಕಾಫಿತೋಟದ ಮಧ್ಯೆ ಪವರ್ ಲೈನ್ ಎಳೆಯಲಾಗಿತ್ತು. ಗಾಳಿಯಿಂದ ಪವರ್‍ಲೈನ್ ತುಂಡಾಗಿ ಮತ್ತೊಂದು ತಂತಿಗೆ ಸ್ಪರ್ಶಿಸಿ ಬೆಂಕಿ ಹತ್ತಿ ಕೊಂಡಿದೆ. ಬೆಂಕಿಯ ಕಿಡಿಯಿಂದಾಗಿ ತೋಟದಲ್ಲಿ ಬೆಂಕಿ ಹತ್ತಿಕೊಂಡು ಇಡೀ ತೋಟಕ್ಕೆ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಸಾಧ್ಯವಾಗದ ಪರಿಣಾಮ 6 ಎಕರೆ ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ ಸಾವಿರಾರು ಕಾಫಿ ಗಿಡಗಳು ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.

ಕಾಫಿತೋಟದಲ್ಲಿ ಬೆಳೆಯಾಗಿದ್ದ ಕಾಫಿಗಿಡ ಸೇರಿದಂತೆ ಮೆಣಸು, ಅಡಿಕೆ ಮರಗಳೂ ಬೆಂಕಿಗೆ ಭಸ್ಮವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಪವರ್ ಲೈನ್‍ನ ಮಾರ್ಗ ಬದಲಾವಣೆ ಮಾಡುವಂತೆ ಕಳೆದ 10ವರ್ಷಗಳಿಂದ ಮೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ಮೆಸ್ಕಾಂ ನಿರ್ಲಕ್ಷ್ಯತನದಿಂದ ಆರು ಎಕರೆ ಕಾಫಿತೋಟ ಸಂಪೂರ್ಣ ನಾಶವಾಗಿದೆ ಎಂದು ತೋಟದ ಮಾಲಕ ತೇಜಸ್‍ಗೌಡ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News