ಕ್ಯಾತನಮಕ್ಕಿ: ನೋಂದಾಯಿತ ವಾಹನಗಳಿಗೆ ಮಾತ್ರ ಪ್ರವೇಶ

Update: 2024-06-28 16:47 GMT

ಕಳಸ: ತಾಲೂಕಿನ ಬಲಿಗೆ ಗ್ರಾಮದ ಕ್ಯಾತನಮಕ್ಕಿ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಇಲಾಖೆಯಲ್ಲಿ ನೋಂದಾಯಿಸಿದ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ತಿಳಿಸಿದ್ದಾರೆ.

ದುರ್ಗಮವಾದ ಈ ಪ್ರದೇಶಕ್ಕೆ ಬೈಕ್ ಮತ್ತಿತರ ಖಾಸಗಿ ವಾಹನಗಳ ಸಂಚಾರದಿಂದ ಬಹಳಷ್ಟು ತೊಂದರೆ ಆಗುತ್ತಿದೆ. ರಕ್ಷಿತ ಅರಣ್ಯಕ್ಕೆ ಒಳಪಡುವ ಈ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಮಾಲಕರು ಕಡ್ಡಾಯವಾಗಿ ಅರಣ್ಯ ಇಲಾಖೆಯ ಬಳಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಅರಣ್ಯ ಇಲಾಖೆಯ ನೀತಿ ನಿಯಮಾವಳಿಗಳಿಗೆ ಒಳಪಟ್ಟು ಜೀಪ್‍ಗಳು ಸಂಚರಿಸಬೇಕು. ಜು.10ರ ಒಳಗೆ ವಾರ್ಷಿಕ ಅಥವಾ ಅರ್ಧವಾರ್ಷಿಕ ಶುಲ್ಕ ಪಾವತಿಸಿ ಅಧಿಕೃತ ಬ್ಯಾಡ್ಜ್ ಪಡೆದುಕೊಳ್ಳಬೇಕು. ಈ ಬಗ್ಗೆ 2021ರಲ್ಲೇ ನಿರ್ಣಯ ಆಗಿದ್ದು ನೊಂದಣಿ ಮಾಡಿಕೊಳ್ಳದ ವಾಹನಗಳು ಮತ್ತಿತರ ಖಾಸಗಿ ವಾಹನಗಳಿಗೆ ಗಿರಿಶ್ರೇಣಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News