'ದಿ ಓಶಿಯನ್ ಪರ್ಲ್ ಹೊಟೇಲ್' ಮೇಲ್ನೋಟದಲ್ಲಿ ಮಂಗಳೂರಿನ ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್

Update: 2024-04-15 14:58 GMT

ಮಂಗಳೂರು: ನಗರದ ಹೃದಯಭಾಗವಾದ ಎಂ.ಜಿ. ರಸ್ತೆಯಲ್ಲಿರುವ ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್ ಮದುವೆ ಮತ್ತಿತರ ಲಕ್ಸುರಿ ಕಾರ್ಯಕ್ರಮಗಳಿಗೆ ಪ್ರಸಿದ್ಧಿ ಪಡೆದ ಸೆಂಟರ್ಗಳಲ್ಲಿ ಒಂದಾಗಿವೆ. ಇಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವುದಿದ್ದರೂ ಕೂಡ ಪ್ರತಿಷ್ಠೆಯ ಸಂಕೇತವಾಗಿದೆ. ಶ್ರೀಮಂತರಿಗೆ ಮಾತ್ರ ಮೀಸಲು ಎಂಬಂತಿದ್ದ ಈ ಕನ್ವೆನ್ಷನ್ ಸೆಂಟರ್ ಇದೀಗ ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಗಳಲ್ಲಿ ಒಂದಾದ 'ದಿ ಓಶಿಯನ್ ಪರ್ಲ್ ಹೊಟೇಲ್'ನ ಮೇಲ್ನೋಟದಲ್ಲಿ ಕಾರ್ಯಾಚರಿಸುತ್ತಿವೆ. ಆ ಬಳಿಕ ಇದು ಮಧ್ಯಮ ವರ್ಗದ ಜನರಿಗೂ ಕೈಗೆಟಕುವ ದರದಲ್ಲಿ ಲಭಿಸುತ್ತಿರುವುದು ವಿಶೇಷ.

ರಾಜ್ಯದ ಪ್ರಖ್ಯಾತ 'ಕನ್ವೆನ್ಷನ್ ಸೆಂಟರ್'ಗಳಲ್ಲಿ ಒಂದಾದ 'ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್' ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಿಜೈ ಸರಕಾರಿ ಬಸ್ ನಿಲ್ದಾಣ, ಮಂಗಳೂರಿನ ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಹೊರ ಜಿಲ್ಲೆ, ರಾಜ್ಯದಿಂದ ಬರುವ ಪ್ರವಾಸಿಗರಿಗೆ ಸಕಾಲಕ್ಕೆ ತಲುಪಬಹುದಾದ ಪ್ರದೇಶದಲ್ಲಿದೆ. ಬಹುಷಃ ಹೊರಗಡೆಯಿಂದ ಬರುವವರಿಗೆ ನಗರದ ಹೃದಯಭಾಗದಲ್ಲಿ ಇಷ್ಟೊಂದು ಸನಿಹದಲ್ಲಿ ಬೇರೆ ಯಾವ ಕನ್ವೆನ್ಷನ್ ಸೆಂಟರ್ ಇಲ್ಲ ಎನ್ನಬಹುದು. ಅತ್ತ ಉತ್ತರ ಕನ್ನಡ ಜಿಲ್ಲೆಯಿಂದ ಇತ್ತ ಕಾಸರಗೋಡು ಜಿಲ್ಲೆಯವರೆಗೆ ಮಾತ್ರವಲ್ಲ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಇಂತಹ ಸುಸಜ್ಜಿತ ಕನ್ವೆನ್ಷನ್ ಸೆಂಟರ್ ಇಲ್ಲ. ಈ ಸೆಂಟರ್ ನ ಸನಿಹದಲ್ಲೇ ಶುಚಿ-ರುಚಿಯಾದ ಊಟೋಪಚಾರಕ್ಕೆ ಖ್ಯಾತಿ ಪಡೆದ 'ದಿ ಓಶಿಯನ್ ಪರ್ಲ್ ಹೊಟೇಲ್' ಇರುವುದು ವಿಶೇಷ.

ಸುಮಾರು 16,730 ಚದರ ಮೀಟರ್ಗಳ ಮೇಲ್ಮೈ ವಿಸ್ತೀರ್ಣ ಮತ್ತು 4,200 ಚದರ ಮೀಟರ್ಗಳ ನೆಲಮಾಳಿಗೆಯ ಪ್ರದೇಶದೊಂದಿಗೆ ಸುಮಾರು 4000 ಆಸನ ಸಾಮರ್ಥ್ಯವನ್ನು ಇದು ಹೊಂದಿದೆ.

ಹವಾನಿಯಂತ್ರಿಯ ವ್ಯವಸ್ಥೆಯ ಈ ಸೆಂಟರ್ನಲ್ಲಿ ಮದುವೆ ಮತ್ತಿತರ ಲಕ್ಸುರಿ ಕಾರ್ಯಕ್ರಮಗಳಲ್ಲದೆ ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸುವ ಸಭಾಂಗಣಗಳೂ ಇವೆ. ಕೆಫೆಟೇರಿಯಾದೊಂದಿಗೆ 3 ಸುಸಜ್ಜಿತ ಕಾನ್ಫರೆನ್ಸ್ ಹಾಲ್ಗಳನ್ನು ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್ ಹೊಂದಿವೆ.

ಕನ್ವೆನ್ಷನ್ ಸೆಂಟರ್ನ ಆಡಿಟೋರಿಯಂ ಮೊದಲ ಮಹಡಿಯಲ್ಲಿದ್ದು, ಇಲ್ಲೇ ಫಂಕ್ಷನ್ ಹಾಲ್ ಇದೆ. ಸುಮಾರು 2,000 ಆಸನ ವ್ಯವಸ್ಥೆ ಇದ್ದು, ಹವಾನಿಯಂತ್ರಿತ ಹಸಿರು ಕೋಣೆಗಳೊಂದಿಗೆ ಆವೃತವಾಗಿದೆ. ಪ್ರತಿಫಲಿತ ಬೆಳಕು, ಉತ್ತಮ ಧ್ವನಿ ವ್ಯವಸ್ಥೆಗಳು ಇವೆ.

ಈ ಸಭಾಂಗಣವು ಏಷ್ಯಾದಲ್ಲೇ ಅತೀ ದೊಡ್ಡ ಅಡಿಟೋರಿಯಂ ಆಗಿದ್ದು, ನಾಲ್ಕು ಗ್ರೀನ್ ರೂಮ್ಗಳು ಮತ್ತು ಬೆಲೆಬಾಳುವ ಪುಶ್-ಬ್ಯಾಕ್ ಸೀಟುಗಳು, ಆಪ್ಟಿಕಲ್-ಫೈಬರ್ ಸ್ಕೈಲೈಟಿಂಗ್ ಹೊಂದಿರುವ ಖ್ಯಾತಿ ಪಡೆದಿದೆ. ಮೊದಲ ಮಹಡಿಯಲ್ಲಿ ಎಕ್ಸಿಬಿಷನ್ ಹಾಲ್ ಇದ್ದು, ಏಕಕಾಲದಲ್ಲಿ ಸುಮಾರು 1,000 ಮಂದಿ ಇದರ ಪ್ರಯೋಜನ ಪಡೆಯಬಹುದಾಗಿದೆ.

ಏಕಕಾಲದಲ್ಲಿ ಸುಮಾರು 1,000 ಮಂದಿ ಭೋಜನ ಮಾಡಬಹುದಾದ ವ್ಯವಸ್ಥೆ ಇದೆ. ಸುಮಾರು 400ರಷ್ಟು ಕಾರುಗಳು ಮತ್ತು 200ರಷ್ಟು ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಕಟ್ಟಡದ ಸುತ್ತಲೂ ಪ್ರತೀ ಕಾರು ಪಾರ್ಕ್ ಕೊಲ್ಲಿಯ ಮೇಲೆ ಫೈರ್ ಹೈಡ್ರಂಟ್ ಸ್ಪ್ರಿಂಕ್ಲರ್ ವ್ಯವಸ್ಥೆ ಇದೆ. ತುರ್ತು ಬಳಕೆಗಾಗಿ ಹೆಚ್ಚುವರಿ ಅಗ್ನಿಶಾಮಕ ಮಾರ್ಗವೂ ಇಲ್ಲಿದೆ.

ಉಳಿದಂತೆ ಸ್ಟ್ಯಾಂಡ್-ಬೈ ಡೀಸೆಲ್ ಜನರೇಟರ್ಗಳು, ಸೆಂಟ್ರಲ್ ಎಸಿ ಪ್ಲಾಂಟ್ಗಳು, ಚಿಲ್ಲರ್ ಪ್ಲಾಂಟ್ಗಳು, ಭೂದೃಶ್ಯ ಮತ್ತು ಜಲಮೂಲಗಳು, 2 ಲಕ್ಷ ಲೀ. ಸಾಮರ್ಥ್ಯದ ಅಂತರ್ಜಲ ಸಂಪ್, ವಿಕಲಚೇತನರಿಗಾಗಿ ಎಲಿವೇಟರ್ ವ್ಯವಸ್ಥೆ ಇದೆ. ನೆಲ ಮಹಡಿಯಿಂದ ಮೊದಲ ಮಹಡಿಗೆ ಎಸ್ಕಲೇಟರ್ ಮತ್ತು ಎಲಿವೇಟರ್ ವ್ಯವಸ್ಥೆ ಇದೆ. ವಿಶ್ರಾಂತಿ ಕೊಠಡಿಯೂ ಇದೆ. ಹೊರಾಂಗಣವಂತೂ ಹಸುರೀಕರಣಗೊಂಡಿವೆ. ಸುಡು ಬೇಸಿಗೆಯಲ್ಲೂ ತಂಪಾದ ವಾತಾವರಣವಿದೆ.

ಈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯುವ ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲದೆ, ರಾಷ್ಟ್ರ-ಅಂತಾರಾಷ್ಟ್ರೀಯ, ರಾಜ್ಯ-ಸ್ಥಳೀಯ ಮಟ್ಟದ ಸಮ್ಮೇಳನಗಳು, ವಿಚಾರ ಸಂಕಿರಣಗಳು ಹೀಗೆ ಯಾವುದೇ ಕಾರ್ಯಕ್ರಮ ನಡೆಸುವುದಿದ್ದರೂ ದಿ ಓಶಿಯನ್ ಪರ್ಲ್ ಹೊಟೇಲ್ನಿಂದಲೇ ಆಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದಿ ಓಶಿಯನ್ ಪರ್ಲ್ ಹೊಟೇಲ್ ಶುಚಿ-ರುಚಿಯಾದ ಸಸ್ಯಹಾರಿ ಮತ್ತು ಮಾಂಸಾಹಾರಿ ಊಟೋಪಾಚಾರಕ್ಕೆ ಹೆಸರುವಾಸಿಯಾಗಿದೆ. ದೇಶ-ವಿದೇಶದ ಅಗ್ರಗಣ್ಯ ನೇತಾರರು ಮಂಗಳೂರಿಗೆ ಆಗಮಿಸಿದರೆ ಹೆಚ್ಚಾಗಿ ತಂಗುವುದು ಮತ್ತು ಭಕ್ಷಭೋಜನ ಸವಿಯುವುದು ಕೂಡ ದಿ ಓಶಿಯನ್ ಪರ್ಲ್ ಹೊಟೇಲ್ನಲ್ಲಾಗಿದೆ. ಇಂತಹ ಪ್ರತಿಷ್ಠಿತ ಹೊಟೇಲ್ನಿಂದಲೇ ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿಗೆ ಊಟ-ತಿಂಡಿ, ಚಹಾ-ಕಾಫಿ, ತಂಪಾದ ಪಾನೀಯ ವ್ಯವಸ್ಥೆ ಕಲ್ಪಿಸುತ್ತಿರುವುದು 'ಕನ್ವೆನ್ಷನ್ ಸೆಂಟರ್ ಮತ್ತು ದಿ ಓಶಿಯನ್ ಪರ್ಲ್ ಹೊಟೇಲ್'ನ ಹಿರಿಮೆಯನ್ನು ಹೆಚ್ಚಿಸಿದೆ ಎನ್ನಬಹುದು.

ದಿ ಓಶಿಯನ್ ಪರ್ಲ್ ಹೊಟೇಲ್ ಮತ್ತು ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಯಾವುದೇ ಶುಭ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಜೀವನಪೂರ್ತಿ ಬದುಕು ನೆಮ್ಮದಿ, ಕುಶಿಯಿಂದ ಇರುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಆ ಕಾರಣಕ್ಕಾಗಿಯೇ ಹೆಚ್ಚಿನ ಜನರು ಈ ಕನ್ವೆನ್ಷನ್ ಸೆಂಟರ್ನಲ್ಲಿ ಮದುವೆ ಮತ್ತಿತರ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲು ಕಾತರರಾಗಿರುತ್ತಾರೆ ಎಂದು ದಿ ಓಶಿಯನ್ ಪರ್ಲ್ ಹೊಟೇಲ್ ಮತ್ತು ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್ನ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ತೆರಿಗೆಯ ಹೊರತಾಗಿಯೂ ಶ್ರೀಮಂತರಿಗೆ ಮಾತ್ರವಲ್ಲದೆ ಮಧ್ಯಮ ವರ್ಗದ ಜನರಿಗೂ ಮಿತ ದರದಲ್ಲಿ ಡಾ.ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್ ಲಭ್ಯವಿದೆ. ಈಗಾಗಲೆ 2024ರ ಡಿಸೆಂಬರ್ವರೆಗೆ ಈ ಕನ್ವೆನ್ಷನ್ ಸೆಂಟರ್ ಬುಕ್ಕಿಂಗ್ ಆಗಿದ್ದು, ಇದರ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ.

ಬುಕ್ಕಿಂಗ್ ಸಹಿತ ಹೆಚ್ಚಿನ ಮಾಹಿತಿಗೆ ಪ್ರಧಾನ ವ್ಯವಸ್ಥಾಪಕರು, ದೂರವಾಣಿ: 0824-2497871/2497872, ಮೊಬೈಲ್: 8971384242 (www.tmapai.in/ email-gm.tmapai@theoceanpearl.in) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಪ್ರಾಯೋಜಿತ ಲೇಖನ




















































Full View 


 


 


 


 


 


 


 


 


 


 


 


 


 


 


 


 


 


 


 


 


 


 


 


 


 



 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News