ಮಂಗಳೂರು : MEIF ಶಾಲಾ ಶಿಕ್ಷಕರಿಗೆ ಅಗ್ನಿ ಸುರಕ್ಷತಾ ಕಾರ್ಯಾಗಾರ

Update: 2023-09-25 11:59 GMT

ಮಂಗಳೂರು : ಅಗ್ನಿ ಸುರಕ್ಷತಾ ಇಲಾಖೆಯ ಸಹಯೋಗದೊಂದಿಗೆ MEIF ವಿದ್ಯಾಸಂಸ್ಥೆಗಳ ನೋಡಲ್ ಅಧಿಕಾರಿಗಳಿಗೆ ಅಗ್ನಿ ಸುರಕ್ಷತಾ ಕಾರ್ಯಾಗಾರ ಅಡ್ಯಾರಿನ ಬರಕಾ ಇಂಟರ್ನ್ಯಾಷನಲ್ ಸ್ಕೂಲ್‌ ನಲ್ಲಿ ಸೋಮವಾರ ನಡೆಯಿತು.

ಕಾರ್ಯಾಗಾರದ ಉದ್ಘಾಟನೆಯನ್ನು ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಭರತ್ ಕುಮಾರ್ ಅವರು ನೆರವೇರಿಸಿ, ಕಾರ್ಯಗಾರವನ್ನು ನಡೆಸಿಕೊಟ್ಟರು.

ಸಮಾರಂಭದಲ್ಲಿ ಬರಕಾ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಧ್ಯಕ್ಷತೆಯನ್ನು MEIF ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ಅವರು ವಹಿಸಿ ಕಾರ್ಯಗಾರವನ್ನು MEIF ಸಂಘಟಿಸಿರುವ ಉದ್ದೇಶದ ಔಚಿತ್ಯವನ್ನು ವಿವರಿಸಿದರು.

ಆರಂಭದಲ್ಲಿ MEIF ಪೂರ್ವವಲಯ ಉಪಾಧ್ಯಕ್ಷರಾದ ಮುಸ್ತಫ ಸುಳ್ಯ ಅವರು ಸ್ವಾಗತಿಸಿ, ಕೊನೆಯಲ್ಲಿ ಕಾರ್ಯಕ್ರಮದ ಸಂಚಾಲಕರು ಪರ್ವೀಝ್ ಅಲಿ ಅವರು ವಂದಿಸಿದರು.

MEIF ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್ ಅವರು ಕಾರ್ಯಕ್ರಮ ವಿವರಿಸಿದರು. ಕಾರ್ಯದರ್ಶಿಗಳಾದ ಶಾರಿಖ್, ಅನ್ವರ್ ಜಿ ಎಂ, ರಹ್ಮತುಲ್ಲ ಬುರೂಜ್, ಹನೀಫ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳ ಒಟ್ಟು 40 ವಿದ್ಯಾಸಂಸ್ಥೆಗಳ 68 ನೋಡಲ್ ಅಧಿಕಾರಿಗಳು ಇಡೀ ದಿನ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರವು ಕೊನೆಯಲ್ಲಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷತೆಯೊಂದಿಗೆ ಮುಕ್ತಾಯಗೊಂಡಿತು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬರಕಾ ಇಂಟರ್ನ್ಯಾಷನ್ ವಿದ್ಯಾಸಂಸ್ಥೆ ಅಡ್ಯಾರ್ ವಹಿಸಿತ್ತು.











 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News