ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರ್ ಹಳೆಯಂಗಡಿಇದರ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ರಿಲಯನ್ಸ್ ಭವನದ ಮುಂಭಾಗದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಿಲಯನ್ಸ್ ನ ಅಧ್ಯಕ್ಷ ಕಲಂದರ್ ಕೌಶಿಕ್ ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. GCC ಸೌದಿ ಅರೇಬಿಯಾದ ಹನೀಫ್ ಪರಂಗಿಬೊಟ್ಟು ಭಾರತದ ಇಂದಿನ ಸ್ಥಿತಿಗತಿ ಬಗ್ಗೆ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಬೊಳ್ಳೂರು ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್, ರಿಲಯನ್ಸ್ ನ ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ಲೆಕ್ಕಪರಿಶೋಧಕ ಅಕ್ಬರ್ ಬೊಳ್ಳೂರು, GCC ಸೌದಿ ಅರೇಬಿಯಾದ ಹಿದಾಯತ್ ಬೊಳ್ಳೂರು, ಮತ್ತು GCC ಕತಾರ್ ನ ಸಂರೋಜ್ ಅಲ್ ಅಕ್ಸ ಉಪಸ್ಥಿತರಿದ್ದರು.
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ರಿಯಾಝ್ ಕೊಪ್ಪಳ, ಮಾಧ್ಯಮ ಉಸ್ತುವಾರಿ ಕಬೀರ್ ಎ.ಆರ್, ಸಂಸ್ಥೆಯ ಹಿರಿಯರಾದ ಸಿದ್ದೀಕ್ ಬೊಳ್ಳೂರು, ಯೂಸುಫ್ ಹೈದರ್ ಬೊಳ್ಳೂರು, ಇಕ್ಬಾಲ್ ಎಂ.ಎ, ಮುಮ್ತಾಜ್ ಕಲ್ಲಾಪು, ಮೊಯ್ದಿನ್ ಇಂದಿರಾನಗರ, ಸದಸ್ಯರಾದ ಇಲ್ಯಾಸ್ ಅಲ್ ಅಕ್ಸ, ಹಕೀಮ ಇಂದಿರಾನಗರ, ಶಮೀಮ್ ನವರಂಗ್, ಇಸ್ಮಾಯಿಲ್ ಬಾವ, ಅಶ್ರಫ್ ಕೈಕಂಬ, ಕಬೀರ್ ಕಲ್ಲಾಪು, ಅಹ್ಮದ್ ಬಾವ ಎಂ.ಸಿ.ಎಫ್, ನಝೀರ್ ಎಂ.ಎಂ, ಸಂಶೀರ್ ಎಂ.ಎಂ, ಅಶ್ರಫ್ ಫ್ಯಾನ್ಸಿ, ಯಾಸೀನ್ ಪಟೇಲ್, ಸಿರಾಜ್ ಬೊಳ್ಳೂರು, ಝಿಯಾನ್ ಇಂದಿರಾನಗರ ಹಾಗೂ ಊರಿನ ನಾಗರಿಕರು ಹಾಜರಿದ್ದರು.
ರಿಲಯನ್ಸ್ ನ ಸಲಹೆಗಾರ ಆರಿಶ್ ನವರಂಗ್ ಸ್ವಾಗತಿಸಿದರು.ಜೊತೆ ಕಾರ್ಯದರ್ಶಿ ರಿಯಾಝ್ ಅಲ್ ಅಕ್ಸ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಗೆ ಮಡಕೆ ಒಡೆಯುವ ಸ್ಪರ್ಧೆ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.