ಮಂಗಳೂರು: ನ. 9ರಂದು ಬ್ಯಾರೀಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಕಾರ್ಯಕ್ರಮ

Update: 2024-11-07 08:35 GMT

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (Bearys Enviro-Architecture Design School) (ಬೀಡ್ಸ್) ಮತ್ತು ಬಿಐಟಿ ಪಾಲಿಟೆಕ್ನಿಕ್ ವತಿಯಿಂದ ಬಿಐಟಿ 12ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮತ್ತು ಬ್ಬೀಡ್ಸ್ 5ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ನ. 9ರಂದು(ಶನಿವಾರ) ಪದವಿ ಪ್ರದಾನ ಸಮಾರಂಭ ಇನೋಳಿಯಲ್ಲಿರುವ ಬ್ಯಾರಿಸ್ ನಾಲೆಜ್ ಕ್ಯಾಂಪಸ್ (Bearys Knowledge Campus)ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ BIT ಪದವಿ ವಿದ್ಯಾರ್ಥಿಗಳ 12ನೇ ಬ್ಯಾಚ್ ಮತ್ತು BEADS ಆರ್ಕಿಟೆಕ್ಚರ್ ಪದವೀಧರರ 5ನೇ ಬ್ಯಾಚ್‌ ನ ವಿದ್ಯಾರ್ಥಿಗಳಿಗೆ ಮತ್ತು ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ ನಂತಹ ವಿವಿಧ ವಿಭಾಗಗಳ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಸನ್ಮಾನ ನಡೆಯಲಿದೆ. ಇದಲ್ಲದೆ ಪ್ರತಿ ವಿಭಾಗದಿಂದ ́Best out going student́ ಪ್ರಶಸ್ತಿಗಳು ಹಾಗೂ ಶೈಕ್ಷಣಿಕ ಸಾಧನೆ ಪ್ರಶಸ್ತಿಗಳನ್ನು ಕೂಡ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿಗಳ ಹಾಗೂ ವಿತ್ತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ , ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿಮಿಟೆಡ್ ನ ಮುಖ್ಯಸ್ಥ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಭಾಗವಹಿಸುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು ಪದವಿ ಪ್ರದಾನ ಭಾಷಣ ಮಾಡಲಿದ್ದು, ಷ್ನೇಡರ್ ಎಲೆಕ್ಟ್ರಿಕ್ ಬೆಂಗಳೂರು ಇದರ ಉಪಾಧ್ಯಕ್ಷರಾದ ಚಿತ್ರಾ ಸುಕುಮಾರ್ ಗೌರವ ಅತಿಥಿಯಾಗಿರುತ್ತಾರೆ. ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ ಅವರು ಅಧ್ಯಕ್ಷತೆ ವಹಿಸುತ್ತಾರೆ.

ಬಿಐಟಿಯ ಪ್ರಾಂಶುಪಾಲರಾದ ಡಾ.ಮಂಝೂರ್ ಬಾಷಾ, ಬೀಡ್ಸ್ ಪ್ರಾಂಶುಪಾಲರಾದ ಅರ್. ಖಲೀಲ್ ರಝಾಕ್, ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ ಪ್ರಾಂಶುಪಾಲರಾದ ಡಾ. ಅಝೀಝ್ ಮುಸ್ತಫಾ, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕರಾದ ಪ್ರೊ.ಪೃಥ್ವಿರಾಜ್ ಭಾಗವಹಿಸಲಿದ್ದಾರೆ ಎಂದು ಬಿಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News