ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ : ಸ್ಪೀಕರ್ ಯು.ಟಿ. ಖಾದರ್ ದಿಗ್ಭ್ರಮೆ

Update: 2023-11-12 18:22 GMT

ಯು.ಟಿ. ಖಾದರ್

ಮಂಗಳೂರು: ಉಡುಪಿಯ ನೇಜಾರಿನಲ್ಲಿ ನಡೆದಿರುವ ತಾಯಿ, ಮಕ್ಕಳ ಹತ್ಯೆಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಇದೊಂದು ಆಘಾತಕಾರಿ ಕೃತ್ಯ ಎಂದು ಹೇಳಿದ್ದಾರೆ.

ರಾಯಚೂರಿನಲ್ಲಿರುವ ಸ್ಪೀಕರ್ ಖಾದರ್ ಅವರು ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಹಂತಕನನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News