ದ್ವಿತೀಯ ಪಿಯುಸಿ ಪರೀಕ್ಷೆ | ಆತೂರು ಬದ್ರಿಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Update: 2024-04-17 11:08 GMT

ಮಂಗಳೂರು : 2023-24ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬದ್ರಿಯ ಮಹಿಳಾ ಕಾಲೇಜು ಆತೂರು ಇಲ್ಲಿಯ ಮೂವರು ವಿದ್ಯಾರ್ಥಿನಿಯರು ವಿಶೇಷ ಶ್ರೇಣಿಯಲ್ಲಿ, ಉಳಿದ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 9 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಆ ಪೈಕಿ 3 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಯೂಸುಫ್ ಕೊಯಿಲರವರ ಪುತ್ರಿ ಫಾತಿಮತ್ ಖೈಮ 553(92.16), ನಝೀರ್ ಕೊಯಿಲರವರ ಪುತ್ರಿ ಫಾತಿಮತ್ ಅಕ್ಮಲ 532(88.66),ಅಬ್ದುಲ್ ಶರೀಫ್ ಕೆಮ್ಮಾರ ಅವರ ಪುತ್ರಿ ಆಶಿಕ 523 (87.16) ಅಂಕ ಗಳಿಸಿರುತ್ತಾರೆ. ಅತ್ಯುತ್ತಮ‌ ಸಾಧನೆಯನ್ನು ಮಾಡಿದಂತಹ ಎಲ್ಲಾ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಕಾಲೇಜಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News