ಪುತ್ತೂರು: 'ಮೀಫ್'ನಿಂದ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

Update: 2023-11-04 10:54 GMT

ಪುತ್ತೂರು, ನ.4: ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್)ದ ವತಿಯಿಂದ ಸಾಲ್ಮರದ ಮೌಂಟೈನ್ ವೀವ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಆಯೋಜಿಸಿರುವ ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾಟಕ್ಕೆ ಪುತ್ತೂರಿನ ಮೌಂಟನ್ ವೀವ್ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು.

 ಪಂದ್ಯಾಟವನ್ನು ಉದ್ಘಾಟಿಸಿದ ಪುತ್ತೂರು ನಗರ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಕೃಷ್ಣಪ್ಪ ಎಂ. ಮಾತನಾಡಿ, ಕ್ರೀಡೆ, ಶಿಕ್ಷಣ ಮತ್ತು ಆರೋಗ್ಯದ ಅವಿಭಾಜ್ಯದ ಅಂಗ. ಕ್ರೀಡೆಯಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ. ನಾನು ಕೂಡ ಸರಕಾರಿ ಹುದ್ದೆಗೆ ನೇಮಕಗೊಂಡಿರುವುದು ಭಾರ ಎತ್ತುವಿಕೆ ಕ್ರೀಡಾಪಟುವಾಗಿ ಎಂದು ಹೇಳಿದರು.

ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೀಫ್ ಉಪಾಧ್ಯಕ್ಷ  ಕೆ.ಎಂ.ಮುಸ್ತಫ ಸುಳ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೌಂಟನ್ ವೀವ್ ಶಾಲೆಯ ಪ್ರಧಾನ ಕಾರ್ಯದರ್ಶಿ ಹಾಜಿ ಯು.ಮುಹಮ್ಮದ್ ಮಾತನಾಡಿ ಶುಭ ಹಾರೈಸಿದರು.

ಮೌಂಟೈನ್ ವೀವ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಆಝಾದ್, ನಿರ್ದೇಶಕರಾದ ಎಲ್.ಟಿ.ಅಬ್ದುರ್ರಝಾಕ್ ಹಾಜಿ, ಅಬ್ದುಲ್ಲ ಹಾಜಿ, ಅಡ್ವಕೇಟ್ ಮತ್ತು ನೋಟರಿ ನೂರುದ್ದೀನ್ ಸಾಲ್ಮರ, ರಕ್ಷಕ-ಶಿಕ್ಷಕರ ಸಂಘದ ಅಧ್ಯಕ್ಷ ಉಸ್ಮಾನ್, ಶರೀಅತ್ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಎ.ಕೊಡುಂಗಾಯಿ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಮೀಫ್ ಪದಾಧಿಕಾರಿಗಳಾದ ರಹ್ಮತುಲ್ಲಾ ಬುರೂಜ್, ಶಾರಿಕ್ ಕುಂಜತ್ತಬೈಲ್, ಅಬ್ದುರ್ರಝಾಕ್ ಗೋಳ್ತಮಜಲು, ಪರ್ವೇಝ್ ಅಲಿ ಮಂಗಳೂರು, ಹೈದರ್ ಮರ್ದಾಳ ಬೆಳ್ತಂಗಡಿ, ಹೈದರ್ ಅನುಗ್ರಹ ಮೊದಲಾದವರು ವೇದಿಕೆಯಲ್ಲಿದ್ದರು.

 ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಸ್ವಾಗತಿಸಿದರು. ಮೌಂಟನ್ ವೀವ್ ಸಂಚಾಲಕ ಮುಹಮ್ಮದ್ ಸಾಬ್ ವಂದಿಸಿದರು.

ಮೌಂಟನ್ ವೀವ್ ದೈಹಿಕ ಶಿಕ್ಷಣ ಶಿಕ್ಷಕರಾದ ಅಶ್ರಫ್, ಜಯರಾಮ, ಮುಖ್ಯೋಪಾಧ್ಯಾಯಿನಿ ಮೋಹನಾಂಗಿ, ತರಬೇತುದಾರ ಇರ್ಷಾದ್ ಮೊದಲಾದವರು ಸಹಕರಿಸಿದರು.

ಶಿಕ್ಷಕ ರವೂಫ್ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳ 21 ತಂಡಗಳು, 300 ಸ್ಪರ್ಧಾಳುಗಳು  ಭಾಗವಹಿಸಿದ್ದರು.










 


 


 


 


 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News