ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಭಾರತದ ರಾಯಭಾರಿಯನ್ನು ಭೇಟಿ ಮಾಡಿದ ಸ್ಪೀಕರ್ ಯು.ಟಿ.ಖಾದರ್

Update: 2024-10-28 14:11 GMT

ಬೆಂಗಳೂರು: ದಕ್ಷಿಣ ಕೊರಿಯಾ ದೇಶದಲ್ಲಿ ಅಧ್ಯಯನ ಪ್ರವಾಸದಲ್ಲಿರುವ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್  ಅವರು ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಭಾರತದ ರಾಯಭಾರಿ, ಹಿರಿಯ ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅಮಿತ್ ಕುಮಾರ್ ಅವರನ್ನು ಭೇಟಿಯಾಗಿ ಸೋಮವಾರ ಸಮಾಲೋಚನೆ ನಡೆಸಿದರು.

ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ಸಂಬಂಧಗಳು, ಶಿಕ್ಷಣ, ವ್ಯಾಪಾರ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಅನೌಪಚಾರಿಕವಾಗಿ ಚರ್ಚಿಸುತ್ತಾ, ದಕ್ಷಿಣ ಕೊರಿಯಾ ದೇಶದ, ಕರ್ನಾಟಕದಲ್ಲಿ ಹೂಡಿಕೆಯ ನಿರೀಕ್ಷೆಗಳು, ಅವಕಾಶಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ಇದೇ ವೇಳೆ, ಸ್ಪೀಕರ್ ಯು.ಟಿ.ಖಾದರ್  ಅವರು ಕರ್ನಾಟಕದ ವಿಶ್ವ ವಿದ್ಯಾಲಯಗಳು ಕೊರಿಯಾ ದೇಶದ ವಿಶ್ವ ವಿದ್ಯಾಲಯಗಳೊಂದಿಗೆ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‍ಗಳ ಮತ್ತು ಉದ್ಯೋಗಾವಕಾಶಗಳ ಕುರಿತು ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುವ ಬಗ್ಗೆ ಭಾರತದ ರಾಯಭಾರಿಗಳೊಂದಿಗೆ ಚರ್ಚಿಸಿದರು.

ಉಭಯ ದೇಶಗಳ ಮೂಲಭೂತಸೌಲಭ್ಯಗಳು, ಆರ್ಥಿಕತೆ ಕುರಿತಾಗಿ ಚರ್ಚಿಸಿ, ಈ ಭೇಟಿ ಫಲಪ್ರದವಾಗಿದ್ದು, ವಿಶೇವಾಗಿ ದಕ್ಷಿಣ ಕೊರಿಯಾ ಮತ್ತು ಕರ್ನಾಟಕದ ನಡುವಿನ ಸಂಬಂಧಗಳು ಇನ್ನು ಹೆಚ್ಚಿನ ರೀತಿ ಬೆಳೆಯಲಿ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಆಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News