ಸುರತ್ಕಲ್: ಸ್ಕೂಟರ್‌ ಗೆ ಜೀಪ್ ಢಿಕ್ಕಿ; ಸವಾರರಿಬ್ಬರು ಗಂಭೀರ

Update: 2024-03-25 09:04 GMT

ಸುರತ್ಕಲ್: ಜೀಪೊಂದು ಸ್ಕೂಟರ್‌ ಗೆ  ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ  ಘಟನೆ ಸುರತ್ಕಲ್ ನಲ್ಲಿ ಸೂರಜ್ ಇಂಟರ್ ನ್ಯಾಷನಲ್ ಬಳಿ ಸೋಮವಾರ ಮಧ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ.

ಗಾಯಾಳುಗಳ ಪೈಕಿ ಒಬ್ಬರು ಬೀಡಿ ಕಾಂಟ್ರಾಕ್ಟರ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸ್ಕೂಟರ್ ಗೆ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಸವಾರರು ರಸ್ತೆಗೆ‌ ಎಸೆಯಲ್ಪಟ್ಟಿದ್ದು, ಬೀಡಿ ಕಾಂಟ್ರಾಕ್ಟರ್ ಅವರ‌ ಮೇಲೆಯೇ ಜೀಪ್ ಹರಿದಿದೆ ಎನ್ನಲಾಗಿದೆ.

ಘಟನೆಯಿಂದ ಗಂಭೀರ ಗಾಯಗೊಂಡ ದ್ವಿಚಕ್ರ ಸವಾರರಿಬ್ಬರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News