ಸುರತ್ಕಲ್:‌ ಮಸೀದಿಗೆ ಕಲ್ಲು ತೂರಾಟ; ಪೊಲೀಸರಿಂದ ತನಿಖೆ

Update: 2024-09-16 03:27 GMT

ಸುರತ್ಕಲ್: ಕೃಷ್ಣಾಪುರ ಮುಸ್ಲಿಂ ಜಮಾಅತ್ ಗೆ ಒಳಪಡುವ ಕಾಟಿಪಳ್ಳ 3ನೇ ಬ್ಲಾಕ್ ನ‌ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಎರಡು ಬೈಕ್ ಗಳಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳ ತಂಡ ಕಲ್ಲು ತೂರಾಟ ನಡೆಸಿರುವ ಘಟನೆ ರವಿವಾರ ರಾತ್ರಿ ವರದಿಯಾಗಿದೆ.‌

ಜನತಾ ಕಾಲನಿ ಸ್ಮಶಾನದ ಕಡೆಯಿಂದ ಎರಡು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಮಸೀದಿಯ ಹಿಂಭಾಗದ ಕಿಟಕಿಗಳ‌ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. 

ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಜನ ಜಮಾಯಿಸಲು ಆರಂಭಿಸಿದ್ದಾರೆ. ತಕ್ಷಣ ಸೇರಿದ್ದ ಜನರನ್ನು ಪೊಲೀಸರು ಚದುರಿಸಿದರು.

ಘಟನಾ ಸ್ಥಳಕ್ಕೆ ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಕಾನುನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ಧಾರ್ಥ್ ಗೋಯಲ್, ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್, ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುಹಮ್ಮದ್ ಸಲೀಮ್ ಅಬ್ಬಾಸ್, ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್., ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ ರಘುನಾಯಕ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿ ಮಸ್ಜಿದುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಕೆ.ಎಚ್. ಅಬ್ದುಲ್ ರಹಿಮಾನ್ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 298, 196, 324(4)ಬಿಎನ್‌ಎಸ್, ಮತ್ತು ಕಲಂ 2 (a), (b), ಕೆಪಿಡಿಲ್ ಪಿ ಕಾಯ್ದೆಯ ಅನ್ವಯ ಪ್ರಕರಣ ದಾಖಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸ್ಥಳದಲ್ಲಿ ಭಿಗಿ ಪೊಲೀಸ್ ಭದ್ರತೆ, ಎಸಿಪಿ ಮೊಕ್ಕಾಂ:

ಘಟನೆ ನಡೆದ ತಕ್ಷಣ ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರು. ಅಲ್ಲದೆ, ಆಯಕಟ್ಟಿನ ಪ್ರದೇಶಗಳ ಪ್ರಾರ್ಥನಾ ಮಂದಿರಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಪ್ರಕರಣ ಭೇದಿಸಲು ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಘಟನೆ ನಡೆದು ಗಂಟೆಯ ಅಂತರದಲ್ಲಿ ದುಷ್ಕರ್ಮಿಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ‌. 2-3 ಗಂಟೆಗಳ‌ ಒಳಗಾಗಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಮಸೀದಿಯ ಆಡಳಿತ ಮಂಡಳಿಗೆ ಭರವಸೆ ನೀಡಿದರು.

ಯಾರೋ ಕಿಡಿಗೇಟಿಗಳು ಮಸೀದಿಗೆ ಕಲ್ಲು ಹೊಡೆದು ಪರಾರಿಯಾಗಿದ್ದಾರೆ. ಈ ಸಂಬಂಧ ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅವರ ತನಿಖೆಗೆ ನಾವು ಸಂಪೂರ್ಣ ಬೆಂಬಲವನ್ನೂ ನೀಡುತ್ತೇವೆ. ಪೊಲೀಸರ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ. ಹಾಗಾಗಿ ನಮ್ಮ ಜಮಾಅತ್ ಬಾಂಧವರು ಅಥವಾ ಯಾರೊಬ್ಬರೂ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು.

ಕೆ.ಎಚ್.‌ ಅಬ್ದುಲ್ ರಹಿಮಾನ್

ಅಧ್ಯಕ್ಷರು, ಮಸ್ಜಿದುಲ್ ಹುದಾ ಜುಮಾ ಮಸೀದಿ 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News