ಉಳ್ಳಾಲ | ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ: ಪೊಕ್ಸೊ ಪ್ರಕರಣ ದಾಖಲು

Update: 2024-01-01 11:06 IST
ಉಳ್ಳಾಲ | ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ: ಪೊಕ್ಸೊ ಪ್ರಕರಣ ದಾಖಲು
  • whatsapp icon

ಉಳ್ಳಾಲ, ಜ.1: ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ದಲಿತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ನಿವಾಸಿ, ರಿಕ್ಷಾ ಚಾಲಕ ರಝೀನ್ ಲೈಂಗಿಕ ಕಿರುಕುಳ ನೀಡಿರುವ ಆರೋಪಿಯಾಗಿದ್ದಾನೆ. ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಆರೋಪಿ ಹಾಗೂ ಮೂಡಿಗೆರೆ ತಾಲೂಕಿನ ಅಣಜೂರು ಜನ್ನಪುರದ 17 ವರ್ಷದ ಯುವತಿಯೊಬ್ಬಳು ಕಳೆದ ನಾಲ್ಕು ತಿಂಗಳುಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೇ ಸಲುಗೆಯಿಂದ ನಾಲ್ಕು ತಿಂಗಳ ಹಿಂದೆ ಯುವತಿಯನ್ನು ಮಂಗಳೂರಿಗೆ ಕರೆಸಿಕೊಂಡಿದ್ದ ಆರೋಪಿ, ಆಕೆಯನ್ನು ಕುಂಪಲದ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಸಂತ್ರಸ್ತೆ ಯುವತಿ ನೀಡಿದ ದೂರಿನಂತೆ ಆರೋಪಿ ರಝೀನ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News