ವಾರ್ತಾಭಾರತಿ ಯೂಟ್ಯೂಬ್ ಚಾನಲ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು

Update: 2024-11-14 05:47 GMT

ಮಂಗಳೂರು: ವಾರ್ತಾಭಾರತಿಯ ಅಧಿಕೃತ ಯೂಟ್ಯೂಬ್ ಚಾನಲ್ (youtube.com/varthabharatinews) ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಬುಧವಾರ ತಡರಾತ್ರಿ ಚಾನಲ್ ಗೆ ಸಂಬಂಧಿಸಿದ ಇಮೇಲ್ ಐಡಿಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಆ ಬಳಿಕ ಚಾನಲ್ ಅನ್ನು ಅವರ ವಶಕ್ಕೆ ತೆಗೆದುಕೊಂಡಿದ್ದಾರೆ.

ಸದ್ಯಕ್ಕೆ ( ಗುರುವಾರ ಬೆಳಗ್ಗೆ 10.56ರವರೆಗೆ) ಚಾನಲ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬಗ್ಗೆ ವಾರ್ತಾಭಾರತಿ ಗೂಗಲ್ ಹಾಗು ಯೂಟ್ಯೂಬ್ ಗೆ ಮಾಹಿತಿ ನೀಡಿದ್ದು ಅವರೊಂದಿಗೆ ವಾರ್ತಾಭಾರತಿ ತಾಂತ್ರಿಕ ತಂಡ ಸಂಪರ್ಕದಲ್ಲಿದೆ.

 

ಸೈಬರ್ ಪೊಲೀಸ್ ಗೆ ದೂರನ್ನೂ ನೀಡಲಾಗಿದೆ. ಸಮಸ್ಯೆ ನಿವಾರಣೆ ಆಗುವವರೆಗೆ ಆ ಚಾನಲ್ ನಲ್ಲಿ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲಿವರೆಗೆ ವಾರ್ತಾಭಾರತಿಯ ಕಾರ್ಯಕ್ರಮಗಳು ಇನ್ನೊಂದು ಚಾನಲ್ Vartha Bharati Stories (youtube.com/@VarthaBharatiStories) ನಲ್ಲಿ ಪ್ರಸಾರವಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News