ದಾವಣಗೆರೆ| ಕಳ್ಳತನವಾಗಿದ್ದ ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು.
ದಾವಣಗೆರೆ: ಜಿಲ್ಲೆಯ ವಿವಿಧಡೆ ಕಳ್ಳತನವಾಗಿದ್ದ ಮೊಬೈಲ್ ಗಳನ್ನು ಪತ್ತೆ ಮಾಡಿದ್ದ ಪೊಲೀಸರು ವಾರಸುದಾರರಿಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಿಂದಿರುಗಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ, ಕಳೆದು ಹೋದ ಮೊಬೈಲ್ ಪೋನ್‌ಗಳನ್ನು ಸಿಇಐಆರ್ ಪೋರ್ಟ್‌ಲ್ ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ ಐಎಂಇಐ ನಂಬರನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ ಮೊಬೈಲ್‌ಗಳ ಪೈಕಿ 25,00,000/-ರೂಗಳು ಮೊತ್ತದ 206 ಮೊಬೈಲ್‌ಗಳನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಿ ವಿತರಿಸಲಾಯಿತು.
ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ / ಕಳೆದು ಹೋದ ಮೊಬೈಲ್ ಪೋನ್‌ಗಳನ್ನು ಸಿಇಐಆರ್ ಪೋರ್ಟ್‌ಲ್ ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ ಐಎಂಇಐ ನಂಬರ್ ಮೂಲಕ ಒಟ್ಟು 3880 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಅದರಲ್ಲಿ 880 ಮೊಬೈಲ್‌ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ, ಸಿಇಎನ್ ಪೊಲೀಸ್ ನಿರೀಕ್ಷಕ ಪಿ ಪ್ರಸಾದ್ ರವರು, ಪೊಲೀಸ್ ಸಿಬ್ಬಂದಿಗಳು ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು.
ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾದಲ್ಲಿ/ ಸುಲಿಗೆಯಾಗಿದ್ದಲ್ಲಿ/ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಇಐಆರ್ ವೆಬ್ ಪೋರ್ಟಲ್ ಗೆ ಬೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆಯಲು ಈ ಮೂಲಕ ತಿಳಿಸಿದ್ದಾರೆ.