ದಾವಣಗೆರೆ | ನಾಡಬಾಂಬ್ ಬಳಸಿ ಕಾಡುಪ್ರಾಣಿಗಳ ಬೇಟೆ ಆರೋಪ : ಓರ್ವನ ಬಂಧನ

Update: 2024-02-11 14:21 GMT

ದಾವಣಗೆರೆ:  ಜಿಲ್ಲೆಯ ನ್ಯಾಮತಿ ಅರಣ್ಯ ಪ್ರದೇಶದಲ್ಲಿ ನಾಡಬಾಂಬ್ ಬಳಸಿ ಕಾಡುಪ್ರಾಣಿ ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ನಿವಾಸಿ ಬಸವರಾಜಪ್ಪ(42 ವರ್ಷ) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಅಪ್ಪು(38) ಪರಾರಿಯಾಗಿದ್ದಾನೆ. ಆರೋಪಿ ಬಳಿ ಇದ್ದ 63 ಜೀವಂತ ನಾಡಬಾಂಬ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳು ನ್ಯಾಮತಿ ಶಾಖೆಯ ಹರಮಘಟ್ಟ ಅರಣ್ಯ ಪ್ರದೇಶದಲ್ಲಿ ನಾಡಬಾಂಬ್ ಗಳನ್ನು ಕೋಳಿ, ಕುರಿ ಮಾಂಸದಲ್ಲಿಟ್ಟು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಪೊಲೀಸರು ಆರೋಪಿ ಬಸವರಾಜಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಶಪಡಿಸಿಕೊಂಡ ಜೀವಂತ ನಾಡಬಾಂಬ್ ಗಳನ್ನು ನಿಷ್ಕ್ರಿಯ ಗೊಳಿಸಲು ಚಿತ್ರದುರ್ಗ ಜಿಲ್ಲೆಯ ಡಿ.ಎಸ್.ಹಳ್ಳಿ ಸ್ಫೋಟಕ ಸಂಗ್ರಹಗಾರಕ್ಕೆ ಕಳಿಸಲಾಗಿದೆ ತಿಳಿದು ಬಂದಿದೆ.  

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News