ದಾವಣಗೆರೆ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ

Update: 2024-01-02 16:38 GMT

ದಾವಣಗೆರೆ : ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಮಹಾನಗರ ಪಾಲಿಕೆ ಬಳಿ ಕರವೇ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು

ಈ ಸತ್ಯಾಗ್ರಹಕ್ಕೆ ಕರ್ನಾಟಕ ಏಕತಾ ವೇದಿಕೆಯ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಬೆಂಬಲವನ್ನು ಸೂಚಿಸಿದರು.

ರಾಜ್ಯಾಧ್ಯಕ್ಷ ಎನ್.ಎಚ್. ಹಾಲೇಶ್ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳು ಶೇಕಡ 60ರಷ್ಟು ಕನ್ನಡ ಭಾಷೆಯಲ್ಲಿ ಶೇಕಡ 40ರಷ್ಟು ಅನ್ಯ ಭಾಷೆಯಲ್ಲಿ ಅಳವಡಿಸುವಂತೆ ಹೊರಡಿಸಿತ್ತು. ಆ ಆದೇಶವನ್ನು ಧಿಕ್ಕರಿಸಿ ಆಂಗ್ಲ, ಹಿಂದಿ ಭಾಷೆ ಹಾಗೂ ಬೇರೆ ಭಾಷೆಗಳಲ್ಲಿ ಅಳವಡಿಸಿರುವ ನಾಮಫಲಕಗಳನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಹೊರಾಟ ಮಾಡಿದ್ದವು.

ಈ ಒಂದು ಹೋರಾಟವನ್ನು ಹತ್ತಿಕುವ ಉದ್ದೇಶದಿಂದ ನಾರಾಯಣಗೌಡ್ರುರವರನ್ನು ಬಂಧಿಸಿರುವುದು ಖಂಡನೆಯ ಈ ಕೂಡಲೇ ರಾಜ್ಯಾದ್ಯಂತ ನಗರಗಳಲ್ಲಿ ಅಳವಡಿಸಿರುವ ಅನ್ಯ ಭಾಷೆ ನಾಮಫಲಕಗಳನ್ನು ತೆರವುಗೊಳಿಸಿ ನಾರಾಯಣಗೌಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ, ಡಾ.ಎಂ.ಜಿ.ಈಶ್ವರಪ್ಪ, ರಾಮದೇವಪ್ಪ, ಮಹೇಶ್ವರಪ್ಪ, ರಾಮೇಗೌಡ ಆರ್ ಎಂ ಶಿವಯ್ಯ, ಶಿವಾನಂದ್ ಪಾಟೀಲ್ , ಮಾರುತಿ , ಜಯರಾಮ್, ರಾಘವೇಂದ್ರ, ಈರಣ್ಣ, ಮಣಿಪಾಲ್ ಮತ್ತು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News