ದೋಗು ಪೂಜಾರಿ ಮಟ್ಟಿ ಮಳಲಿ

Update: 2024-09-11 12:49 GMT

ಮಂಗಳೂರು: ಗಂಜಿಮಠ ಗ್ರಾಪಂ ಮಾಜಿ ಸದಸ್ಯ, ಮಂಗಳೂರು ತಾಪಂ ಮಾಜಿ ಸದಸ್ಯ ಮಳಲಿ ಮಟ್ಟಿ ನಿವಾಸಿ ದೋಗು ಪೂಜಾರಿ (67) ಅಸೌಖ್ಯದಿಂದ ನಿಧನರಾದರು.

ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಅವರು 4 ಅವಧಿಗೆ ಗ್ರಾಪಂ ಸದಸ್ಯರಾಗಿ, 1 ಅವಧಿಗೆ ತಾಪಂ ಸದಸ್ಯರಾಗಿ ಜನಸೇವೆಯಲ್ಲಿ ತೊಡಗಿದ್ದರು. ಅದಲ್ಲದೆ ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.

* ಶಾಸಕ ಡಾ.ವೈ. ಭರತ್ ಶೆಟ್ಟಿ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್.ಕೆ., ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜ, ಗ್ರಾಪಂ ಸದಸ್ಯ ನೋಣಯ್ಯ ಕೋಟ್ಯಾನ್, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್, ರೋಹಿತ್ ತಾರಿಗುಡ್ಡೆ, ಜೆಸಿಂತಾ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ನೀರುಮಾರ್ಗ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷೆ ಸೆಲಿನ್ ಡಿಮೆಲ್ಲೋ, ಉಪಾಧ್ಯಕ್ಷ ಉದಯ ಕುಡುಪು, ಅಂಬ್ರೋಸ್ ಡಿಸೋಜ, ಲ್ಯಾನ್ಸಿ ಸಿಕ್ವೇರಾ, ಸನತ್ ಕುಮಾರ್ ರೈ, ಜೂಲಿಯಾನ್ ಪಿರೇರಾ, ಪ್ರೀತಾ ಡಿಸೋಜ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News