ಕಮಲಮ್ಮ ಅಳದಂಗಡಿ

Update: 2024-08-30 16:12 GMT

ಬೆಳ್ತಂಗಡಿ: ಗ್ರಾಪಂ ಮಾಜಿ ಸದಸ್ಯೆ, ಕೃಷಿ ತಜ್ಞೆ ಅಳದಂಗಡಿಯ ಕಮಲಮ್ಮ (80) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಪತ್ರಕರ್ತ ಕೃಷ್ಣ ಭಟ್ ಆಳದಂಗಡಿ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಮಾವು ಮತ್ತು ಗುಲಾಬಿ ಕಸಿ ಕಟ್ಟುವಿಕೆಗೆ ಹೆಸರಾಗಿದ್ದ ಕಮಲಮ್ಮ ಮಾವಿನ ತೋಟ ನಿರ್ಮಿಸಿದ್ದರು. ವೈವಿಧ್ಯಮಯ ಕೃಷಿ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಹಲವು ವರ್ಷ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News