ರಾಘವ ಅಂಚನ್

Update: 2024-09-03 16:37 GMT

ಮಂಗಳೂರು, ಸೆ.3: ಸಿಪಿಎಂ ಪಕ್ಷದ ಹಿರಿಯ ಸದಸ್ಯ ಕಾಂ.ರಾಘವ ಅಂಚನ್ ಬಜಾಲ್ (85) ನಿಧನರಾಗಿದ್ದಾರೆ.

ಪತ್ನಿ, ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.

ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬಜಾಲ್ ಪ್ರದೇಶದ ಪಕ್ಕಲಡ್ಕದಲ್ಲಿ ಹುಟ್ಟಿ ಬೆಳೆದಿದ್ದ ರಾಘವ ಅಂಚನ್ ಎಳೆಯ ಪ್ರಾಯದಲ್ಲೇ ನೇಯ್ಗೆ, ಹೆಂಚು, ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿ ದುಡಿದಿದ್ದ ರಾಘವ ಅಂಚನ್ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲಿದ್ದರು.

1973ರಲ್ಲಿ ಭೂಮಸೂದೆ ಜಾರಿಗಾಗಿ ರೈತ ಸಂಘಟನೆ ಆಯೋಜಿಸಿದ ಮಂಗಳೂರಿನಿಂದ ಬೆಂಗಳೂರವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರಮುಖ ಕಾರ್ಯಕರ್ತರಲ್ಲಿ ರಾಘವ ಅಂಚನ್ ಕೂಡಾ ಒಬ್ಬರಾಗಿದ್ದರು. ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿಯಾಗಿದ್ದ ಅವರು ಹಲವಾರು ಜನಪರ ಚಟುವಟಿಕೆಗಳಿಗೆ ನೇತೃತ್ವ ನೀಡಿದ್ದರು. ಇಳಿವಯಸ್ಸಿನಲ್ಲೂ ಎಡಪಕ್ಷದ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.

*ರಾಘವ ಅಂಚನ್‌ರ ಅಗಲುವಿಕೆಯು ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಸಂತಾಪ ಸೂಚನೆಯಲ್ಲಿ ತಿಳಿಸಿದೆ. ರಾಘವ ಅಂಚನ್‌ರ ಅಗಲಿಕೆಗೆ ಡಿವೈಎಫ್‌ಐ, ಪಕ್ಕಲಡ್ಕ ಯುವಕ ಮಂಡಲ, ಜನತಾ ವ್ಯಾಯಾಮ ಶಾಲೆಯು ಸಂತಾಪ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಎಂ. ಅಹ್ಮದ್
ವೀಣಾ ರಾವ್
ಖತೀಜಮ್ಮ