ವೀಣಾ ರಾವ್
Update: 2024-09-06 12:48 GMT
ಉಡುಪಿ: ಕಿನ್ನಿಮುಲ್ಕಿ ನಿವಾಸಿ, ನಿವೃತ್ತ ಅರಣ್ಯ ಅಧಿಕಾರಿ ಕೂಡ್ಲು ರಘುರಾಮ್ ಅವರ ಧರ್ಮಪತ್ನಿ ವೀಣಾ ರಾವ್(71) ಅಲ್ಪಕಾಲದ ಅಸೌಖ್ಯದಿಂದ ಸೆ.6ರಂದು ನಿಧನರಾದರು.
ಉಡುಪಿ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ನಿರ್ದೇಶಕ ರಾಗಿದ್ದ ಇವರು, ರಾಮಕ್ಷತ್ರಿಯ ಸಂಘಗಳ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ತಮ್ಮ ಪತಿ, ಪುತ್ರ ನೇತ್ರ ತಜ್ಞ ಡಾ.ಕೃಷ್ಣ ರಪ್ರಸಾದ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.