ಗದಗ | ಟ್ರ್ಯಾಕ್ಟರ್ ಸಾಲದ ಕಂತು ಕಟ್ಟುವ ವಿಚಾರದಲ್ಲಿ ಜಗಳ : ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ‌

Update: 2024-03-04 14:16 IST
ಗದಗ | ಟ್ರ್ಯಾಕ್ಟರ್ ಸಾಲದ ಕಂತು ಕಟ್ಟುವ ವಿಚಾರದಲ್ಲಿ ಜಗಳ : ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ‌

ರೇಣುಕಾ ತೇಲಿ/ಸಾವಕ್ಕ ತೇಲಿ/ ಮಂಜುನಾಥ್

  • whatsapp icon

ಗದಗ : ಕೌಟುಂಬಿಕ ಕಲಹಕ್ಕೆ ಬೇಸತ್ತು ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ವರದಿಯಾಗಿದೆ.

ಸಾಲದ ವಿಷಯವಾಗಿ ಉಂಟಾದ ಮನಸ್ತಾಪದಿಂದ ರೈಲು ಹಳಿಗೆ ಹಾರಿ ತಾಯಿ ರೇಣುಕಾ ತೇಲಿ (49) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದ ಮಂಜುನಾಥ್ (22) ಮೃತಪಟ್ಟಿದ್ದಾರೆ. ಮತ್ತೊಂದೆಡೆ ತಾಯಿ-ಮಗನ ಸಾವಿನ ಸುದ್ದಿ ತಿಳಿದು ಮೃತ ತಾಯಿಯ ಸಹೋದರಿ ಸಾವಕ್ಕ ತೇಲಿ (47) ಎಂಬ ಮಹಿಳೆ ಕೂಡ ಮನೆಯಲ್ಲೇ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಕುಟುಂಬದ ಸದಸ್ಯರು ಜಗಳವಾಡಿಕೊಂಡಿದ್ದರು ಎನ್ನಲಾಗಿದೆ.

ಬ್ಯಾಂಕ್ ನಿಂದ 4 ಲಕ್ಷ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಇದರ ಕಂತು ಕಟ್ಟುವ ವಿಚಾರದಲ್ಲಿ ನಡೆದ ಜಗಳ ಈ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸರು ದೂರು ದಾಖಲಿಸಿ ತನಿಖೆ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News