ಗದಗ | ವಿಕೋಪಕ್ಕೆ ತಿರುಗಿದ ಆಸ್ತಿ ಜಗಳ : ತಂಗಿಯನ್ನೇ ಹತ್ಯೆ ಮಾಡಿದ ಅಣ್ಣ

Update: 2024-09-24 22:39 IST
ಗದಗ | ವಿಕೋಪಕ್ಕೆ ತಿರುಗಿದ ಆಸ್ತಿ ಜಗಳ : ತಂಗಿಯನ್ನೇ ಹತ್ಯೆ ಮಾಡಿದ ಅಣ್ಣ
  • whatsapp icon

ಗದಗ : ಅಣ್ಣ-ತಂಗಿ ಮಧ್ಯೆ ಉಂಟಾದ ಆಸ್ತಿ ವಿವಾದದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರ ನಡೆದಿದೆ.

ಕಾಳಮ್ಮ ಬೆಟಗೇರಿ ಹತ್ಯೆಗೀಡಾದ ಮಹಿಳೆ ಎನ್ನಲಾಗಿದೆ. ಈಶ್ವರಪ್ಪ ರಂಗಪ್ಪ ಕ್ಯಾದಿಗೆಹಳ್ಳಿ ಎಂಬಾತ ತನ್ನ ಒಡಹುಟ್ಟಿದ ತಂಗಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ಬಳಿಕ ಆರೋಪಿಯೇ ಸ್ವತಃ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News