ಅಬುಧಾಬಿಯ ಮೊದಲ ಹಿಂದೂ ದೇವಾಲಯ ಉದ್ಘಾಟನೆ

Update: 2024-02-19 15:49 GMT

ನರೇಂದ್ರ ಮೋದಿ | Photo: PTI 

ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯವನ್ನು ಭಕ್ತಿಪಠಣದ ಮತ್ತು ಸ್ವಾಮಿನಾರಾಯಣ ಪಂಥದ ಆಧ್ಯಾತ್ಮಿಕ ಮುಖಂಡರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು.

ಇದೇ ಸಂದರ್ಭ ಬೊಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ವಿಶ್ವದಾದ್ಯಂತ ನಿರ್ಮಿಸಿರುವ ಸ್ವಾಮಿನಾರಾಯಣ ಪಂಥದ 1,200ಕ್ಕೂ ಅಧಿಕ ಮಂದಿರಗಳಲ್ಲಿ ಏಕಕಾಲದಲ್ಲಿ ನಡೆದ 'ಜಾಗತಿಕ ಆರತಿ' ಕಾರ್ಯಕ್ರಮದಲ್ಲೂ ಪ್ರಧಾನಿ ಮೋದಿ ಪಾಲ್ಗೊಂಡರು. ಭಾರತ ಮತ್ತು ಯುಎಇ ಎರಡೂ ರಾಷ್ಟ್ರಗಳು ಹಂಚಿಕೊಳ್ಳುವ ಸಾಮರಸ್ಯ, ಶಾಂತಿ ಮತ್ತು ಸಹಿಷ್ಣುತೆಯ ಮೌಲ್ಯಗಳಿಗೆ ಈ ದೇವಾಲಯವು ನಿರಂತರ ಗೌರವವಾಗಿದೆ ಎಂದು ಮೋದಿ ಹೇಳಿದ್ದಾರೆ. ದುಬೈ-ಅಬುಧಾಬಿ ಶೇಕ್ ಝಾಯೆದ್ ಹೆದ್ದಾರಿಯ ಬಳಿಯ ಅಲ್ ರಕ್ಷಾಬಳಿ 27 ಎಕರೆ ಪ್ರದೇಶದಲ್ಲಿ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಈ ಶಿಲಾ ದೇಗುಲವನ್ನು ನಿರ್ಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News