ದಮ್ಮಾಮ್: ಕೃಷ್ಣಾಪುರ ಇಸ್ಲಾಮಿಕ್‌ ಸೋಶಿಯಲ್‌ ವೆಲ್ಫೇರ್‌ ಅಸೋಸಿಯೇಶನ್‌ ವತಿಯಿಂದ "ಕಿಸ್ವ ಫೆಸ್ಟ್‌ 2023"

Update: 2023-12-24 07:00 GMT

ದಮ್ಮಾಮ್: ಕೃಷ್ಣಾಪುರ ಇಸ್ಲಾಮಿಕ್‌ ಸೋಶಿಯಲ್‌ ವೆಲ್ಫೇರ್‌ ಅಸೋಸಿಯೇಶನ್‌ ಇದರ ವತಿಯಿಂದ "ಕಿಸ್ವ ಫೆಸ್ಟ್‌ 2023" ಕಾರ್ಯಕ್ರಮವು ಡಿ.14 ರಂದು ಗುರುವಾರ ದಮ್ಮಾಮ್ ನ ಹಿನಾಬಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಕೃಷ್ಣಾಪುರ ಖಾಝಿ ಹಾಜಿ E.K ಇಬ್ರಾಹಿಂ ಮುಸ್ಲಿಯಾರ್, ಬಡವರ ಕಣ್ಣೀರೊರೆಸಿ  ಅಲ್ಲಾಹನ ಮಾರ್ಗದಲ್ಲಿ ಕಾರ್ಯಪ್ರವೃತ್ತರಾಗುವ ಎಲ್ಲರಿಗೂ ಪರಲೋಕದ ವಿಜಯವಿದೆ ಎನ್ನುತ್ತಾ ಕಿಸ್ವದ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು 

ಸಮಾರಭದ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅಲ್ ಬದ್ರಿಯಾ ಒಕ್ಕೂಟ ಜಮಾಅತ್ ನ ಅಧ್ಯಕ್ಷರಾದ ಹಾಜಿ ಮುಮ್ತಾಜ್ ಅಲಿ, ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ದತಿಯ ಕ್ರಮದಿಂದ ಮನುಷ್ಯರು ಹಲವಾರು ರೋಗಗಳ ದಾಸರಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಿಡ್ನಿ ವೈಪಲ್ಯದಂತಹ ಮಾರಕ ಕಾಯಿಗಳಿಗೆ ತುತ್ತಾಗುತ್ತಿವವರ ಸಂಖ್ಯೆ ಹೆಚ್ಚಾಗುತ್ತಿದೆ.  ಈ ನಿಟ್ಟಿನಲ್ಲಿ "ಕಿಸ್ವ" ಡಯಾಲಿಸಿಸ್ ಕೇಂದ್ರ ತೆರೆಯುವ ಬಗ್ಗೆ ಕಾರ್ಯಪ್ರವೃತ್ತರಾಗಿರುವುದು, ಸಮುದಾಯದ ಕಿಡ್ನಿ ವೈಫಲ್ಯ ಹೊಂದಿರುವ ಬಡ ರೋಗಿಗಳಿಗೆ ಒಂದು ವರದಾನವಾಗಿದೆ. ಸಮುದಾಯಾದ ಎಲ್ಲರೂ ಕಿಸ್ವದ ಈ  ಉದಾತ್ತ ಸೇವೆಯೊಂದಿಗೆ  ಕೈಜೋಡಿಸಬೇಕೆಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೌದಿ ಅರೇಬಿಯಾದ ಪ್ರತಿಷ್ಠಿತ ಅಲ್‌ ಮುಝೈನ್ ಕಾಂಟ್ರಾಕ್ಟಿಂಗ್ ಕಂಪನಿಯ ಸಿಇಒ ಝಕರಿಯಾ ಜೋಕಟ್ಟೆ ಯವರು ಮಾತನಾಡಿ,  ಕಿಸ್ವ ಹಮ್ಮಿಕೊಂಡ ಯೋಜನೆಗಳು ಆದಷ್ಟು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿ. ಇದರ ಸದುಪಯೋಗವನ್ನು ಸಮಾಜದ ಬಡವರು ಪಡೆಯುವತಂತಾಗಲಿ ಎಂದು ಹಾರೈಸಿದರು .

ಸೌದಿ ಅರೇಬಿಯಾದ ಪ್ರತಿಷ್ಠಿತ  ಎಕ್ಸ್ಪರ್ಟೈಝ್ ‌ ಕಾಂಟ್ರಾಕ್ಟಿಂಗ್ ಕಂಪನಿಯ ಉಪಾಧ್ಯಕ್ಷ ಹಾಜಿ ಶೇಖ್  ಕರ್ನಿರೆಯವರು ಮಾತನಾಡುತ್ತಾ, ಸಮುದಾಯಲ್ಲಿ ಇಂತಹ ಬಡವರ ಪರ ಕಾಳಜಿ ಇರುವ ಯೋಜನೆಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದರು .

ಕಿಸ್ವ ಇದರ ಅಧ್ಯಕ್ಷರಾದ ಕಬೀರ್ ಕೆ.ಎಂ ರವರು ಸಮಾರಂಭದ ಅಧ್ಯಕ್ಷತೆತೆಯನ್ನು ವಹಿಸಿದ್ದರು . ಕಿಸ್ವದ ಸ್ಥಾಪಕಾಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಎನ್‌ ಜಿಸಿ  ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಮಾಜಿ ಶಾಶಕರಾದ ಬಿ. ಮೊಹಿದಿನ್ ಬಾವ , ತಮೀಮಿ ಲಾ ಫರ್ಮ್ ನ ಸಿಇಒ ಅಬ್ದುಲ್ ಅಝೀಝ್ ,ಅಲ್-ಬದ್ರಿಯಾ ಎಜುಕೇಷನಲ್ ಅಸೋಸಿಯೇಷನ್ ನ ಅಧ್ಯಕ್ಷ  ಜನಾಬ್ ಅಬೂಬಕ್ಕರ್, ಅಲ್‌ ಮುಝೈನ್  ಕಂಪನಿಯ ಸಿಇಒ ಹಾಜಿ ಮುಹಮ್ಮದ್ ಶರೀಫ್ ಬೋಳಾರ್ , ಕೃಷ್ಣಾಪುರ ಡೆವಲಪ್ಮೆಂಟ್ ಕಮಿಟಿಯ ಅಧ್ಯಕ್ಷರಾದ ಜನಾಬ್. ಶರೀಫ್, ಟೇಬಲ್ ಫೋರ್ ಇದರ ಜನಾಬ್ ಮುಬೀನ್ ಕೃಷ್ಣಾಪುರ ,ಐಐಸಿಸಿ ಇದರ ಸಿಇಒ ಜನಾಬ್ ಅನ್ಸಾಫ್ ಉಪಸ್ಥಿತರಿದ್ದರು .

ಮಾಸ್ಟರ್ ಮುಈಝ್  ಕೃಷ್ಣಾಪುರ ಖಿರಾಾತ್ ಪಠಿಸಿದರು . ಜನಾಬ್ ಅಬ್ದುಲ್ ಖಾದರ್ ಬಾಂಬೆ ಸಭೆಯಲ್ಲಿದ್ದ ಎಲ್ಲರನ್ನು ಸ್ವಾಗತಿಸಿದರು . K.C ಮುಹಮ್ಮದ್ ಅಲಿ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು . ಕೊನೆಯಲ್ಲಿ ಕಾರ್ಯದರ್ಶಿ ಇಮ್ತಿಯಾಜ್ ಜಮಾತ್ ವಂದಿಸಿದರು.

 

 

 

 

 

 

 







 


 


 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News