ಡಿಕೆಎಸ್ ಸಿ ಯುಎಇ ಸಮಿತಿಯ ಮಹಾಸಭೆ: ನೂತನ ಸಮಿತಿ ಅಸ್ತಿತ್ವಕ್ಕೆ
ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಮಂಗಳೂರು ಇದರ ಅಧಿನದಲ್ಲಿರುವ ಡಿಕೆಎಸ್ ಸಿ ಯುಎಇ ಸಮಿತಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜಾಮಿಅಃ ಸಅದಿಯ ಅರಬಿಯ ಇಂಡಿಯನ್ ಸೆಂಟರ್ ಅಲ್ ಗಿಸೈಸ್ ದುಬೈ ಇದರ ಸಭಾಂಗಣದಲ್ಲಿ ನಡೆಯಿತು.
ಡಿಕೆಎಸ್ ಸಿ ಯುಎಇ ಗೌರವಧ್ಯಕ್ಷರಾದ ಸೈಯದ್ ತ್ಸಾಹಾ ಬಾಫಕಿ ತಂಙಳ್ ರವರ ದುಆದೊಂದಿಗೆ ಸಭೆ ಆರಂಭಗೊಂಡಿತು. ಡಿಕೆಎಸ್ ಸಿ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಎಂ.ಇ. ಮೂಳೂರು ಅವರು ಅಧ್ಯಕ್ಷತೆ ವಹಿಸಿದ್ದರು.
ಸಭಾಧ್ಯಕ್ಷ ಹಾಜಿ ಎಂ.ಇ ಮೂಳೂರು ಅವರು ಮಾತನಾಡಿ, ಡಿಕೆಎಸ್ ಸಿ ಕರ್ನಾಟಕದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದ ಶೈಕ್ಷಣಿಕ, ನೈತಿಕ ಮತ್ತು ಸಾಮಾಜಿಕ ಏಳಿಗೆಯ ಉದೇಶವನ್ನಿಟ್ಟು ಕೊಂಡು ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದೆ. ಬಹು: ಕುಂಬೋಳ್ ಆಟಕೋಯ ತಂಙಳ್ ರವರ ನಾಯಕತ್ವದಲ್ಲಿ ಬೃಹತ್ ಮಟ್ಟದಲ್ಲಿ ಬಹುಮುಖೀ ಸಮಾಜ ಸೇವಾ ಯೋಜನೆಗಳನ್ನು ಮುಖ್ಯವಾಗಿ ಶೈಕ್ಷಣಿಕ ಸಬಲೀಕರಣದ ಕ್ಷೇತ್ರದಲ್ಲಿ ಅದ್ಭುತವಾದ ಪ್ರಗತಿಯನ್ನು ಸಾಧಿಸುತ್ತ ಮುನ್ನಡೆಯುತ್ತಿದೆ ಎಂದು ಹೇಳಿದರು.
ಅಲ್ ಅನ್ಸಾರ್ ಮಸ್ಜಿದ್, ಅಲ್ ಇಹ್ಸಾನ್ ಮಹಿಳಾ ಕಾಲೇಜು ಮೊದಲಾದ ಬೃಹತ್ ಯೋಜನೆಗಳನ್ನು ಡಿಕೆಎಸ್ ಸಿ ಇದರ ಯುಎಇ ಸಮಿತಿ ಪೂರೈಸಿದ್ದು ಮುಂದಕ್ಕೆ ಅಲ್ ಇಹ್ಸಾನ್ ಮಹಿಳಾ ಹಾಸ್ಟೆಲ್ ಕಟ್ಟಡದ ಯೋಜನೆಯನ್ನೂ ಕೈಗೊಳ್ಳಲಿದೆ ಎಂದರು.
ಡಿಕೆಎಸ್ ಸಿ ಸಿಲ್ವರ್ ಜುಬಿಲಿ ಚೆಯರ್ಮನ್ ಹಾಜಿ ಇಕ್ಬಾಲ್ ಕಣ್ಣಂಗಾರ್ ರವರು ಮಾತಾಡಿ, ಡಿಕೆಎಸ್ ಸಿ ಇದರ ಯುಎಇ ಸಮಿತಿಯು ಪ್ರಸಕ್ತ ತನ್ನ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಯೋಜನೆಗಳನ್ನು ಹಮ್ಮಿ ಕೊಂಡಿದೆ. ಮುಖ್ಯವಾಗಿ ಅಲ್ ಇಹ್ಸಾನ್ ಶಿಕ್ಷಣ ಸಮುಚ್ಚಯದಲ್ಲಿ ವಿವಿಧೋದ್ದೇಶದ ಆಡಳಿತ ಕಟ್ಟಡದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿ ಕೊಂಡಿದ್ದು ಅದಕ್ಕೆ ಎಲ್ಲರ ಸಹಕಾರ ಕೋರಿದರು.
ಚುಣಾವಣ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಸೈಯದ್ ತ್ವಾಹ ಭಾಫಕಿ ತಂಙಳ್ ರವರು ಮಾತನಾಡುತ್ತಾ, ಡಿಕೆಎಸ್ ಸಿ ಅಧೀನದಲ್ಲಿ ಮದ್ರಸ ಹಾಗೂ ವೆಲ್ಫೇರ್ ವಿಂಗ್ ನ ಅಗತ್ಯತೆಗಳ ಬಗ್ಗೆ ತಿಳಿಸಿದರು. ನಂತರ ಅವರು ನೂತನ ಸಮಿತಿಯನ್ನು ಸಭೆಯ ಅನುಮತಿಯೊಂದಿಗೆ ಮಂಡಿಸಿದರು.
ನೂತನ ಸಮಿತಿಯ ಗೌರವಧ್ಯಕ್ಷರಾಗಿ ಸೈಯದ್ ತ್ವಾಹ ಭಾಫಕಿ ತಂಙಳ್, ಅಧ್ಯಕ್ಷರಾಗಿ ಹಾಜಿ ಎಂ. ಇ. ಮೂಳೂರು, ಕಾರ್ಯಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಜಿಪ, ಉಪಾದ್ಯಕ್ಷರಾಗಿ ಹಾಜಿ ನವಾಝ್ ಕೋಟೆಕಾರ್, ಮುಹಮ್ಮದ್ ಆಲಿ ಮೂಡುತೋಟ, ಲತೀಫ್ ತಿಂಗಳಾಡಿ, ಕೋಶಾಧಿಕಾರಿಯಾಗಿ ಹಾಜಿ ಇಬ್ರಾಹಿಂ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಯೂಸುಫ್ ಆರ್ಲಪದವು, ಉಪಸಮಿತಿ ಕಾರ್ಯದರ್ಶಿಯಾಗಿ ಶರೀಫ್ ಬೊಳ್ಮಾರ್, ಮೀಟಿಂಗ್ ನಿರ್ವಹಣಾ ಕಾರ್ಯದರ್ಶಿಯಾಗಿ ರಿಯಾಝ್ ಮೂಡುತೋಟ, ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿಯಾಗಿ ವಹಾಬ್ ಕಂಜಿಲಕುಂಜಿ, ವರದಿ ಹಾಗೂ ಮೀಡಿಯಾ ನಿರ್ವಹಣೆ ಕಮರುದ್ದೀನ್ ಗುರುಪುರ, ಯುನಿಟ್ ಕಲೆಕ್ಷನ್ ಉಸ್ತುವಾರಿ ರಿಯಾಝ್ ಕುಳಾಯಿ, ಸಂಘಟನಾ ಕಾರ್ಯದರ್ಶಿಯಾಗಿ ಶುಕೂರ್ ಜೋಕಟ್ಟೆ ಹಾಗೂ ಇಬ್ರಾಹಿಂ ಕಳತ್ತೂರು, ಲೆಕ್ಕಪರಿಶೋಧಕರಾಗಿ ಅಬ್ದುಲ್ಲಾ ಕುಂಞ ಪೆರುವಾಯಿ, ಉಪದೇಶಕರಾಗಿ ಹಾಜಿ ಮುಹ್ಯುದೀನ್ ಕುಟ್ಟಿ ಕಕ್ಕಿಂಜೆ, ಹಾಜಿ ಇಕ್ಬಾಲ್ ಕನ್ನಂಗಾರ್, ಹಾಜಿ ಅಬ್ದುಲ್ ರಝಾಕ್ ದೇವಾ, ಹಾಜಿ ಅಬೂಸಾಲಿಹ್ ಮಂಗಳೂರು, ಅಬ್ದುಲ್ ಲತೀಫ್ ಮುಲ್ಕಿ ಸಂಚಾಲಕರಾಗಿ ಎಂ.ಇ. ಸುಲೈಮಾನ್ ಮೂಳೂರು, ಮುಹಮ್ಮದ್ ಶುಕೂರ್ ಮನಿಲಾ, ಅಶ್ರಫ್ ಸತ್ತಿಕ್ಕಲ್, ಇಸ್ಮಾಯಿಲ್ ಬಾಬ ಮೂಳೂರು, ಅಕ್ಬರ್ ಅಲಿ ಸುರತ್ಕಲ್, ಸಿದ್ದೀಕ್ ಉಳ್ಳಾಲ, ಸಮದ್ ಬೀರಾಲಿ, ಅಶ್ರಪ್ ಉಳ್ಳಾಲ, ನಝೀರ್ ಕುಪ್ಪೆಟ್ಟಿ, ಸಮೀರ್ ಕೊಳ್ನಾಡು, ಮುಹ್ಯುದ್ದೀನ್ ಅಸೀಬ್ ಎಡಂಬಲ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಕಾರ್ಯಕಾರಿ ಸಮಿತಿಗೆ 36 ಸದಸ್ಯರನ್ನು ಸೇರಿಸಲಾಯಿತು.
ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಆರ್ಲಪದವು ಸ್ವಾಗತಿಸಿದರು. ಕಮರುದ್ದೀನ್ ಗುರುಪುರ ವರದಿ ವಾಚಿಸಿದರು. ಅಬ್ದುಲ್ಲಾ ಕುಂಞಿ ಪೆರುವಾಯಿ ಅವರ ಸಹಕಾರದೊಂದಿಗೆ ಲೆಕ್ಕ ಪರಿಶೋಧಕರಾದ ಅಫ್ಲಲ್ ಮಂಗಳೂರು ಲೆಕ್ಕ ಪತ್ರ ಮಂಡಿಸಿದರು. ಕಮ್ಯನಿಕೇಶನ್ ಸೆಕ್ರೆಟರಿ ಶಬೀರ್ ಜೋಕಟ್ಟೆ ಧನ್ಯವಾದ ಸಮರ್ಪಿಸಿದರು.