24 ಗಂಟೆಯೊಳಗೆ ದುಬೈ ವಿಮಾನ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ: ಸಿಒಒ

Update: 2024-04-18 17:55 GMT

PC : X/@DXBMediaOffice

ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 24 ಗಂಟೆಗಳೊಳಗೆ ಪೂರ್ಣ ಕಾರ್ಯಾಚರಣೆಯ ಸಾಮಥ್ರ್ಯಕ್ಕೆ ಮರಳುತ್ತದೆ ಎಂದು ದುಬೈ ವಿಮಾನನಿಲ್ದಾಣಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಮಜೀದ್ ಅಲ್-ಜೊಕರ್‍ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಯುಎಇಗೆ ಅಪ್ಪಳಿಸಿದ ಚಂಡಮಾರುತದ ಹಿನ್ನೆಲೆಯಲ್ಲಿ ಜಲಾವೃತಗೊಂಡಿದ್ದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರಲು ಸಮರೋಪಾದಿಯ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಗಳು ಸಹಜಸ್ಥಿತಿಗೆ ಮರಳಿದ ನಂತರ, ಹಾನಿಯನ್ನು ನಿರ್ಣಯಿಸುತ್ತೇವೆ ಮತ್ತು ನಷ್ಟದ ಪ್ರಮಾಣವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News