ಅಬ್ದುಲ್ಲ ಮಾದುಮೂಲೆಗೆ ಅಬುಧಾಬಿಯಲ್ಲಿ ಅದ್ಧೂರಿ ಬೀಳ್ಕೊಡುಗೆ
ಅಬುಧಾಬಿ: ಇಪ್ಪತ್ತೈದು ವರ್ಷಗಳ ದೀರ್ಘಕಾಲ ಅನಿವಾಸಿ ಜೀವನವನ್ನು ಕೊನೆಗೊಳಿಸಿ ತಾಯ್ನಾಡಿಗೆ ಮರಳುತ್ತಿರುವ ಸಾಮಾಜಿಕ ಮುಂದಾಳು, ಝಾಎದ್ ಫೌಂಡೇಶನ್ ಅಬುಧಾಬಿ ಇದರ ಆರ್ಥಿಕ ತಜ್ಞ , ಇಂಡಿಯನ್ ಸ್ಕೂಲ್ ಅಬುಧಾಬಿ ಇದರ ಬೋರ್ಡ್ ಸದಸ್ಯರೂ ಆಗಿದ್ದ ಅಬ್ದುಲ್ಲ ಮಾದುಮೂಲೆಯವರಿಗೆ ಅನಿವಾಸಿ ಕನ್ನಡಿಗ ಸಂಘಟನೆಯಾದ ಕೆಸಿಎಫ್ ಯುಎಇ ಇದರ ವತಿಯಿಂದ ಅದ್ಧೂರಿ ಬೀಳ್ಕೊಡುಗೆ ಸಮಾರಂಭವನ್ನು ಕೆಸಿಎಫ್ ಅಬುಧಾಬಿ ಕಚೇರಿಯಲ್ಲಿ ನಡೆಸಲಾಯ್ತು.
ಹಸೈನಾರ್ ಅಮಾನಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಿಎಂಎಚ್, ಹಕೀಂ ತುರ್ಕಳಿಕೆ, ಕೆ ಎಚ್ ಸಖಾಫಿ ಮೊದಲಾದವರು ಮಾತನಾಡಿದರು.
ಸಂಘಟನೆಯ ಗೌರವ ಸ್ಮರಣಕೆಗಳನ್ನು ಸ್ವೀಕರಿಸಿದ ಅಬ್ದುಲ್ಲ ಮಾದುಮೂಲೆಯವರು ಕೆಸಿಎಫ್ ನ ಸಾಮಾಜಿಕ ಸಾಂಸ್ಕೃತಿಕ ಸೇವಾ ಚಟುವಟಿಕೆಯೊಂದಿಗಿನ ಅಭಿಮಾನವನ್ನು ಹಾಗೂ ಉತ್ತರ ಕರ್ನಾಟಕದಲ್ಲಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಕ್ರಾಂತಿಯನ್ನೂ ಅಭಿನಂದಿಸಿ ಮಾತನಾಡಿದರು. ಅದೇ ರೀತಿ ಸಮುದಾಯದ ಹಕ್ಕುಗಳ ರಕ್ಷಣೆಗೆ ವಿದ್ಯಾಭ್ಯಾಸ ಒಂದೇ ದಾರಿ, ಆದುದರಿಂದ ಯುವ ಸಮೂಹವು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ಕಬೀರ್ ಬಾಯಂಬಾಡಿ ಸ್ವಾಗತಿಸಿದರು. ಉಮರ್ ಈಶ್ವರಮಂಗಲ ವಂದಿಸಿದರು.