ಕುವೈತ್ ನ ಮಾಜಿ ಪ್ರಧಾನಿ ಶೇಖ್ ಜಬರ್ ಮುಬಾರಕ್ ಅಲ್ ಸಬಾಹ್ ನಿಧನ

Update: 2024-09-14 12:57 GMT

ಶೇಖ್ ಜಬರ್ ಮುಬಾರಕ್ ಅಲ್ ಸಬಾಹ್ | PC : X

ಕುವೈತ್ : ಕುವೈತ್ ನ ಮಾಜಿ ಪ್ರಧಾನಿ ಶೇಖ್ ಜಬರ್ ಮುಬಾರಕ್ ಅಲ್ ಹಮದ್ ಅಲ್ ಮುಬಾರಕ್ ಅಲ್ ಸಬಾಹ್ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು ಎಂದು Gulf News ಸುದ್ದಿ ಸಂಸ್ಥೆ ವರದಿ ಮಾಡಿದೆ.

1942ರಲ್ಲಿ ಜನಿಸಿದ ಶೇಖ್ ಜಬರ್, ಅಮೀರಿ ದಿವಾನಿಯಲ್ಲಿ ಆಡಳಿತಾತ್ಮಕ ಹಾಗೂ ಹಣಕಾಸು ವ್ಯವಹಾರಗಳ ನಿಯಂತ್ರಕರಾಗಿ ತಮ್ಮ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದರು.

ಇದಾದ ನಂತರ ಹಿಂದಿರುಗಿ ನೋಡದ ಶೇಖ್ ಜಬರ್, ಆಡಳಿತ ನಿರ್ದೇಶಕ, ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರಗಳ ಸಹಾಯಕ ಅಧೀನ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಗಳಿಗೇರಿದರು. ಹವಾಲಿ ಮತ್ತು ಅಹ್ಮದಿ ಪ್ರಾಂತಗಳ ರಾಜ್ಯಪಾಲರಾದರು.

ಶೇಖ್ ಜಬರ್ ಅವರು ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಮಿಕ ಖಾತೆ ಹಾಗೂ ಮಾಹಿತಿ ಖಾತೆ ಸೇರಿದಂತೆ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಎಮೀರ್ ಅವರ ಕಚೇರಿಯಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುವ ಮೂಲಕ ಕುವೈತ್ ಸರಕಾರದಲ್ಲಿ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿಕೊಂಡರು.

2001ರಲ್ಲಿ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವರಾಗಿ ನೇಮಕಗೊಂಡ ಶೇಖ್ ಜಬರ್, ಉಪ ಪ್ರಧಾನಿ, ಆಂತರಿಕ ಸಚಿವ ಹಾಗೂ 2006ರಲ್ಲಿ ರಕ್ಷಣಾ ಸಚಿವರಂತಹ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದರು. ಇದೇ ಹುದ್ದೆಗಳಿಗೆ ಅವರು 2011ರವರೆಗೆ ಮರು ನೇಮಕಗೊಂಡರು.

ನವೆಂಬರ್ 2011ರಲ್ಲಿ ಕುವೈತ್ ಪ್ರಧಾನಿಯಾಗಿ ನೇಮಕಗೊಂಡ ಶೇಖ್ ಜಬರ್, 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೂ ಕುವೈತ್ ನ ಪ್ರಧಾನಿಯಾಗಿದ್ದರು.

ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶವನ್ನು ಹಲವಾರು ಸವಾಲುಗಳ ನಡುವೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News